ನಿಜಕ್ಕೂ ಆರ್ ಎಸ್ ಎಸ್ ಅಟಲ್ ಬಿಹಾರಿ ವಾಜಪೇಯಿ ಅವರನ್ನು ದೂರ ಇಟ್ಟಿತ್ತೆ? ಅಷ್ಟಕ್ಕೂ ಅಡ್ವಾಣಿ ಮೇಲಿದ್ದಷ್ಟೂ ಪ್ರೀತಿ ವಾಜಪೇಯಿ ಮೇಲೆ ಸಂಘ ಪರಿವಾರಕ್ಕೆ ಇರಲಿಲ್ಲವೆ? ಹೀಗೊಂದು ಪ್ರಶ್ನೆ ಮೂಡಿದರೂ ಆಶ್ಚರ್ಯವಿಲ್ಲ. ಹಾಗಾದರೆ ಅದಕ್ಕೆ ಕಾರಣ ಏನು?

ಉಲ್ಲೇಖ್ ಎನ್ ಪಿ ಅವರು ಬರೆದಿರುವ ‘ದಿ ಅನ್ ಟೋಲ್ಡ್ ವಾಜಪೇಯಿ, ಪೊಲಿಟಿಶಿಯನ್ ಆ್ಯಂಡ್ ಪಾರಾಡಾಕ್ಸ್’ ಪುಸ್ತಕದಲ್ಲಿ ಹಲವಾರು ವಿಚಾರಗಳನ್ನು ತೆರೆದಿರಿಸುತ್ತಾರೆ. ಆರ್ ಎಸ್ ಎಸ್ ನವರಿಗೆ ಯಾಕೆ ಕಡಿಮೆ ಪ್ರೀತಿ ಎಂಬುದನ್ನು ಹೇಳುತ್ತಾ ಹೋಗುತ್ತಾರೆ.
ವಾಜಪೇಯಿ ಒಂದು ರೀತಿಯಲ್ಲಿ ವಿಲಕ್ಷಣವಾದ ಆರ್ ಎಸ್ ಎಸ್ ಮನುಷ್ಯ. ಮಾಂಸಾಹಾರವನ್ನು ಅವರು ಸೇವಿಸುತ್ತಾರೆ. ವಿಸ್ಕಿಯನ್ನು ತೆಗೆದುಕೊಳ್ಳುತ್ತಾರೆ ಎಂಬ ಅಂಶವೂ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಇದೇ ಕಾರಣಕ್ಕೆ ವಾಜಪೇಯಿ ಅವರನ್ನು ಆರ್ ಎಸ್ ಎಸ್ ನವರು ಡಿಸ್ ಲೈಕ್ ಮಾಡುತ್ತಿದ್ದರೋ? ಗೊತ್ತಿಲ್ಲ.
ಇತಿಹಾಸದ ಪುಟಗಳು, ಬಿಜೆಪಿಯಲ್ಲಿ ಆಗಾಗ ನಡೆದ ಘಟನಾವಳಿಗಳು ಇದನ್ನು ಹೌದು ಎನ್ನುತ್ತವೆ. ವಾಜಪೇಯಿ ಪ್ರಧಾನಿ ಆಗುವ ವೇಳೆಯೂ ಈ ಅಂಶ ಒಂದು ಹಂತದಲ್ಲಿ ಚರ್ಚೆಗೆ ಬಂದಿತ್ತು. ಆದರೆ ಏನೆ ಇರಲಿ, ಹಿರಿಯ ಚೇತನವೊಂದು ಅಗಲಿದೆ. ಅದಕ್ಕೆ ನಮನ ಸಲ್ಲಿಸಲೇಬೇಕು.