ಕನ್ನಡ ಸಿನಿಮಾಗಳಲ್ಲಿ ಬಟ್ಟೆ ಬಿಚ್ಚುವ ಟ್ರೆಂಡ್ ಹೆಚ್ಚಾಗುತ್ತಿದೆ. ಈ ಹಿಂದೆ ಬ್ಯಾಕ್'ಲೆಸ್ ವಿಡಿಯೋ ಹಾಗೂ ಫೋಟೋ ಮೂಲಕ ನಟಿಯರಾದ ಪೂಜಾ ಹಾಗೂ ಸಂಜನಾ ಭಾರೀ ವಿವಾದಕ್ಕೀಡಾಗಿದ್ದರು. ಇದೀಗ  ಸಾಲಿಗೆ 'ವೈರ' ಸಿನಿಮಾ ನಾಯಕಿ ನಟಿ ಪ್ರಿಯಾಂಕಾ ಮಲ್ನಾಡ್ ಕೂಡಾ ಇದೇ ಸಾಲಿಗೆ ಸೇರಿದ್ದಾರೆ.

ಬೆಂಗಳೂರು(ಸೆ.24): ಕನ್ನಡ ಸಿನಿಮಾಗಳಲ್ಲಿ ಬಟ್ಟೆ ಬಿಚ್ಚುವ ಟ್ರೆಂಡ್ ಹೆಚ್ಚಾಗುತ್ತಿದೆ. ಈ ಹಿಂದೆ ಬ್ಯಾಕ್'ಲೆಸ್ ವಿಡಿಯೋ ಹಾಗೂ ಫೋಟೋ ಮೂಲಕ ನಟಿಯರಾದ ಪೂಜಾ ಹಾಗೂ ಸಂಜನಾ ಭಾರೀ ವಿವಾದಕ್ಕೀಡಾಗಿದ್ದರು. ಇದೀಗ ಸಾಲಿಗೆ 'ವೈರ' ಸಿನಿಮಾ ನಾಯಕಿ ನಟಿ ಪ್ರಿಯಾಂಕಾ ಮಲ್ನಾಡ್ ಕೂಡಾ ಇದೇ ಸಾಲಿಗೆ ಸೇರಿದ್ದಾರೆ.

ನವರಸನ್ ನಟಿಸಿ, ನಿರ್ದೇಶಿಸಿರುವ ‘ವೈರ’ ಸಿನಿಮಾದ ನಾಯಕಿ ನಟಿ ಪ್ರಿಯಾಂಕ ಮಲ್ನಾಡ್ ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಸೆನ್ಸಾರ್ ಮಂಡಳಿಯಿಂದ ‘ವೈರ’ ಸಿನಿಮಾಗೆ ‘ಎ’ ಸರ್ಟಿಫಿಕೇಟ್ ನೀಡಿದೆ. ಆದರೆ ಸೆನ್ಸಾರ್ ಮಂಡಳಿಯ ಈ ನಡೆ ಚಿತ್ರತಂಡದ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಗಾಂಧಿನಗರದಲ್ಲಿ ಈಗ ‘ವೈರ’ ಸಿನೆಮಾದ್ದೇ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಕನ್ನಡ ಸಿನಿಮಾಗಳಲ್ಲಿ ಹೆಚ್ಚುತ್ತಿರುವ ಈ ಬೆತ್ತಲೆ ಸಂಸ್ಕೃತಿ ನೋಡಿದರೆ ಸಿನಿಮಾದ ಪಬ್ಲಿಸಿಟಿಗಾಘಿ ಹೀಗೆ ಮಾಡಿದರಾ ಎಂಬ ಅನುಮಾನ ಕಾಡುತ್ತದೆ.