ರೈಲ್ವೆ ಇಲಾಖೆಯಲ್ಲಿ ಮತ್ತೆ ಭರ್ಜರಿ ನೇಮಕಾತಿ : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್

First Published 29, Mar 2018, 2:06 PM IST
Vacancy in Indian Railways hiked
Highlights

ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 90,000  ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಇದೀಗ ಹುದ್ದೆಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದೆ.

ನವದೆಹಲಿ : ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 90,000  ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಇದೀಗ ಹುದ್ದೆಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದೆ.

90 ಸಾವಿರ ಹುದ್ದೆಗಳೊಂದಿಗೆ,  ಇದೀಗ ಮತ್ತೆ 20 ಸಾವಿರ ಹೆಚ್ಚುವರಿ ಹುದ್ದೆಗಳನ್ನು ಸೇರಿಸಲಾಗಿದೆ. ಇದರಿಂದ ರೈಲ್ವೆ ಇಲಾಖೆಯಲ್ಲಿ ಒಟ್ಟು 1,10000 ಹುದ್ದೆಗಳು ಖಾಲಿ ಇದ್ದಂತಾಗಿದೆ.

ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದು ರೈಲ್ವೆ ಹೇಳಿಕೊಂಡಿತ್ತು. ಇದೀಗ ಮತ್ತೆ ಅದರೊಂದಿಗೆ 20 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಸುವುದಾಗಿ  ರೈಲ್ವೆ ಇಲಾಖೆ ಘೋಷಿಸಿದೆ.

ಈ ಹುದ್ದೆಯ ವೇತನ ಶ್ರೇಣಿಯೂ  ಕೂಡ ಅತ್ಯುತ್ತಮವಾಗಿದೆ.  

loader