'ಸಿದ್ಧಗಂಗಾ ಮಠದ ಮೇಲೆ ಆಣೆ ಮಾಡಿದವರು ಉದ್ದಾರ ಆಗಿಲ್ಲ. ವೀರಶೈವ ಹಾಗೂ ಲಿಂಗಾಯಿತ ಸಮುದಾಯದ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿರುವ ಎಂ.ಬಿ. ಪಾಟೀಲರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು 100 ವರ್ಷ ಪೂರೈಸಿರುವ ನಡೆದಾಡುವ ದೇವರು, ಮಹಾತಪಸ್ವಿಗಳು. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಮೊದಲು ಭೇಟಿ ನೀಡಿದ ಮಠ ಸಿದ್ಧಗಂಗಾ ಮಠ.

ಬೆಂಗಳೂರು(ಸೆ.12): ಲಿಂಗಾಯಿತ ಹಾಗೂ ವೀರಶೈವ ಧರ್ಮಯುದ್ಧದಲ್ಲಿ ರಾಜಕೀಯ ನಾಯಕರು ವೈಯಕ್ತಿಕ ಸಮರಕ್ಕಿಳಿದ್ದಾರೆ. ಲಿಂಗಾಯತ ಹಾಗೂ ವೀರಶೈವ ವಿಷಯದಲ್ಲಿ ಸಿದ್ಧಗಂಗಾ ಶ್ರೀಗಳನ್ನು ಎಳೆದು ತಂದ ಸಚಿವ ಎಂ.ಬಿ. ಪಾಟೀಲ್ ಅವರ ವಿರುದ್ಧ ಬಿಜೆಪಿ ಮುಖಂಡ ವಿ.ಸೋಮಣ್ಣ ತೀರ್ವವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮಣ್ಣ ವಾಗ್ದಾಳಿ ನಡೆಸಿದ ಪರಿ ಹೀಗಿದೆ

'ಸಿದ್ಧಗಂಗಾ ಮಠದ ಮೇಲೆ ಆಣೆ ಮಾಡಿದವರು ಉದ್ದಾರ ಆಗಿಲ್ಲ. ವೀರಶೈವ ಹಾಗೂ ಲಿಂಗಾಯಿತ ಸಮುದಾಯದ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿರುವ ಎಂ.ಬಿ. ಪಾಟೀಲರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು 100 ವರ್ಷ ಪೂರೈಸಿರುವ ನಡೆದಾಡುವ ದೇವರು, ಮಹಾತಪಸ್ವಿಗಳು. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಮೊದಲು ಭೇಟಿ ನೀಡಿದ ಮಠ ಸಿದ್ಧಗಂಗಾ ಮಠ.

ಲಿಂಗಾಯಿತ ಹಾಗೂ ವೀರಶೈವ ಸಮುದಾಯ ಕರ್ನಾಟಕದಲ್ಲಿ 1 ಕೋಟಿಗೂ ಹೆಚ್ಚಿದ್ದಾರೆ. ಸಮುದಾಯದ ಹೆಸರಿನಲ್ಲಿ ಒಡೆದು ಹಾಳುವ ನೀತಿ ಅನುಸರಿಸುತ್ತಿದ್ದೀರಾ. ಕಳೆದ 4.5 ವರ್ಷದಲ್ಲಿ ಸಚಿವರಾಗಿ ಸಕಲ ಅಧಿಕಾರ ಅನುಭವಿಸಿದ್ದೀರಾ. ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ ಮೇಲೆ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಿದೆ. ಕಳೆದ ನಾಲ್ಕೂವರೆ ವರ್ಷದಿಂದ ಏನು ಮಾಡುತ್ತಿದ್ರಿ. ಆಗಲೆ ಹೋರಾಟ ಮಾಡಬಹುದಿತ್ತು. ಪದೇ ಪದೇ ಸಿದ್ಧಗಂಗಾ ಶ್ರೀಗಳನ್ನು ಈ ವಿಷಯದಲ್ಲಿ ಎಳೆದು ತಂದರೆ ಸುಟ್ಟುಹೋಗ್ತೀರಾ. ಅವರಿಗೆ ಸಿಟ್ಟು ಬಂದರೆ ಪಾಟೀಲರು ಕಳೆದು ಹೋಗ್ತಾರೆ ನಾನೂ ಕಳೆದು ಹೋಗ್ತೀನಿ.

ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ. ಸಮುದಾಯವನ್ನು ಒಂದು ಮಾಡಬೇಕೆಂದರೆ ಅಖಿಲ ಭಾರತ ವೀರಶೈವ ಮಹಾಸಭಾ ಇದೆ. ಸಾವಿರಾರು ಮಂದಿ ಬುದ್ಧಿಜೀವಿಗಳಿದ್ದಾರೆ. ಅವರ ಜೊತೆ ಕೈಜೋಡಿಸಿ. ಇದನ್ನು ಬಿಟ್ಟು ನನ್ನದೆ ಬೇಳೆಕಾಳು ಬೇಯಿಸಿಕೊಳ್ಳಬೇಕು ಎಂದು ಹೋದರೆ ಪಂಕ್ಚರ್ ಆಗೋಯ್ತೀರಾ. ನಿಮಗೆ ಇನ್ನು ಐದಾರು ತಿಂಗಳು ಅಧಿಕಾರವಿದೆ. ಈಗಾಗಲೇ ಎಷ್ಟು ಬೇಕೋ ಅಷ್ಟು ಮಾಡಿಕೊಂಡಿದ್ದೀರಿ. ಇನ್ನು ಬೇಕಾದರೆ ಮಾಡಿಕೊಳ್ಳಿ. ಸಮುದಾಯದ ಹಾಗೂ ಶ್ರೀಗಳ ತಂಟೆಗೆ ಹೋದರೆ ನಿಮಗೆ ತೊಂದರೆ ತಪ್ಪಿದ್ದಿಲ್ಲ' ಎಂದು ಏಕವಚನದಲ್ಲಿ ಹಿಗ್ಗಾಮುಗ್ಗಾ ನಿಂದಿಸಿದರು.