ವಿ.ಸೋಮಣ್ಣಗೆ ಕಾಡುತ್ತಿದೆಯಂತೆ ಗೊಂದಲ..!

V Somanna Confused About Election
Highlights

ಸಚಿವ ಎಂ. ಕೃಷ್ಣಪ್ಪ ಅವರ ಪುತ್ರ, ಹಾಲಿ ಶಾಸಕ ಪ್ರಿಯಾ ಕೃಷ್ಣ ಅವರು ಮರು ಆಯ್ಕೆ ಬಯಸುವುದು ಖಚಿತ. ಇನ್ನು ಬಿಜೆಪಿಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರು ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಬೇಕೊ ಅಥವಾ ಬೇಡವೊ ಎಂಬ ಗೊಂದಲದಲ್ಲಿದ್ದಾರೆ.

ಬೆಂಗಳೂರು : ಸಚಿವ ಎಂ. ಕೃಷ್ಣಪ್ಪ ಅವರ ಪುತ್ರ, ಹಾಲಿ ಶಾಸಕ ಪ್ರಿಯಾ ಕೃಷ್ಣ ಅವರು ಮರು ಆಯ್ಕೆ ಬಯಸುವುದು ಖಚಿತ. ಇನ್ನು ಬಿಜೆಪಿಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರು ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಬೇಕೊ ಅಥವಾ ಬೇಡವೊ ಎಂಬ ಗೊಂದಲದಲ್ಲಿದ್ದಾರೆ. ಪಕ್ಷದಿಂದಲೂ ಮೊದಲ ಆಯ್ಕೆ ಸೋಮಣ್ಣ ಅವರೇ. ತಮಗೆ ಟಿಕೆಟ್ ಬೇಡ ಎಂದು ನಿರ್ಧರಿಸಿದಲ್ಲಿ ಬೇರೆ ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸು ವುದೂ ಬಹುತೇಕ ಅವರೇ.

ಸೋಮಣ್ಣ ಮನದಲ್ಲಿ ತಮ್ಮ ಪುತ್ರ ಡಾ.ಅರುಣ್ ರಾಜಕೀಯ ಪ್ರವೇಶಕ್ಕೆ ದಾರಿ ಮಾಡಿಕೊಡುವ ಆಲೋಚನೆ ಇದೆ.

ಆದರೆ, ಪಕ್ಷ ಇದಕ್ಕೆ ಒಪ್ಪುವ ಸಾಧ್ಯತೆ ತೀರಾ ಕಡಮೆ. ಸೋಮಣ್ಣ ನಂತರದ ಸ್ಥಾನದಲ್ಲಿ ಬಲವಾಗಿ ಕೇಳಿಬರುತ್ತಿರುವ ಹೆಸರು ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಅವರದ್ದು. ಸಂಘ ಪರಿವಾರದೊಂದಿಗೂ ಉತ್ತಮ ಸಂಬಂಧ ಹೊಂದಿರುವ ಉಮೇಶ್ ಅವರ ಬಗ್ಗೆ ಪಕ್ಷದಲ್ಲೂ ಒಲವಿದೆ. ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿ ಕೊರತೆ ಇದೆ.

loader