ನವದೆಹಲಿ (ಮೇ 18): ಅಮೆರಿಕ ಹಾಗೂ ಉತ್ತರ ಕೊರಿಯಾ ಸಂಬಂಧ ಸುಧಾರಣೆಯಾದ ಬೆನ್ನಲ್ಲೇ, ಭಾರತವೂ ಉತ್ತರ ಕೊರಿಯಾ ಜೊತೆ ಸಂಬಂಧ ಸುಧಾರಣೆಗೆ ಮುಂದಡಿ ಇಟ್ಟಿದೆ. 20 ವರ್ಷಗಳ ಬಳಿಕ ಭಾರತದ ಸಚಿವರೊಬ್ಬರು ಉತ್ತರ ಕೊರಿಯಾಕ್ಕೆ ಐತಿಹಾಸಿಕ ಭೇಟಿ ನೀಡಿದ್ದಾರೆ. 

ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಜ| (ನಿವೃತ್ತ) ವಿ.ಕೆ. ಸಿಂಗ್ ಯಾವುದೇ ಸದ್ದುಗದ್ದಲ ಇಲ್ಲದೆಯೇ ಮೇ 15 ಮತ್ತು 16 ರಂದು ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದು, ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕೊರಿಯಾ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದಾರೆ. 

ಉತ್ತರ ಕೊರಿಯಾ ಉಪಾಧ್ಯಕ್ಷ ಕಿಮ್ ಯೊಂಗ್ ಡೇ, ವಿದೇಶಾಂಗ ಹಾಗೂ ಸಾಂಸ್ಕೃತಿಕ ಖಾತೆ ಸಚಿವರ ಜೊತೆ ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಹಕಾರದ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ಕೊರಿಯಾದ ಅಧಿಕೃತ ಸುದ್ದಿಪತ್ರಿಕೆ ರೋಡೊಂಗ್ ಸಿನ್ಮನ್ ವರದಿ ಮಾಡಿದೆ.