ಡೆಹ್ರಾಡೂನ್ :  ಈಗಾಗಲೇ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಉತ್ತರಾಖಂಡ್ ನಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು  ಹವಾಮಾನ ಇಲಾಖೆ ಹೇಳಿದೆ. 

ಇಲ್ಲಿನ ಡೆಹ್ರಾಡೂನ್, ಉತ್ತರಕಾಶಿ,  ಉದಾಮ್ ಸಿಂಗ್ ನಗರ ಸೇರಿದಂತೆ ಹಲವೆಡೆ ಕಳೆದ  24 ಗಂಟೆಗಳಿಂದಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮುಂದಿನ ಮೂದು ಭಾರೀ ಮಳೆ ಸುರಿಯಲಿದೆ ಎಂದು ಎಚ್ಚರಿಸಿದೆ. 

ಈ ನಿಟ್ಟಿನಲ್ಲಿ ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.