ನವದೆಹಲಿ (ಫೆ.12): ದೇಶವನ್ನು ಕೊಳ್ಳೆ ಹೊಡೆದವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಭವಿಷ್ಯವನ್ನು ನಾಶಮಾಡಿದವರಿಗೆ ಈ ಬಾರಿ ಚುನಾವಣೆಯಲ್ಲಿ ಸರಿಯಾಗಿ ಶಿಕ್ಷೆ ನೀಡಿ ಎಂದು ಪ್ರಧಾನಿ ಮೋದಿ ಉತ್ತರಖಂಡ ಜನತೆಗೆ ಕೇಳಿಕೊಂಡಿದ್ದಾರೆ.
ನವದೆಹಲಿ (ಫೆ.12): ದೇಶವನ್ನು ಕೊಳ್ಳೆ ಹೊಡೆದವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಭವಿಷ್ಯವನ್ನು ನಾಶಮಾಡಿದವರಿಗೆ ಈ ಬಾರಿ ಚುನಾವಣೆಯಲ್ಲಿ ಸರಿಯಾಗಿ ಶಿಕ್ಷೆ ನೀಡಿ ಎಂದು ಪ್ರಧಾನಿ ಮೋದಿ ಉತ್ತರಖಂಡ ಜನತೆಗೆ ಕೇಳಿಕೊಂಡಿದ್ದಾರೆ.
ಸರ್ಜಿಕಲ್ ದಾಳಿ ನಡೆಸಿದಾಗ ಅದಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ಗೆ ಸರಿಯಾಗಿ ಟಾಂಗ್ ನೀಡಿದ್ದಾರೆ. 40 ವರ್ಷಗಳಿಂದ ಓಆರ್ ಓಪಿ ಕೂಗು ಕೇಳಿ ಬರುತ್ತಿದ್ದರೂ ಕಾಂಗ್ರೆಸ್ ನಿದ್ದೆ ಮಾಡುತ್ತಿತ್ತು. ಕಳೆದ 60 ವರ್ಷಗಳಲ್ಲಿ ಭರೀ ಭ್ರಷ್ಟಾಚಾರವನ್ನು ನಡೆಸಿದೆ ಎಂದಿದ್ದಾರೆ.
ಕಳೆದ 70 ವರ್ಷಗಳಲ್ಲಿ ದೇಶವನ್ನು ಲೂಟಿ ಹೊಡೆದವರ ಸಮಯ ಅಂತ್ಯವಾಗಿದೆ. ದೇಶವನ್ನು ಕೊಳ್ಳೆದವರು ಬೆಲೆ ತೆತ್ತಲಿದ್ದಾರೆ ಎಂದು ನಾನು ಭರವಸೆ ನೀಡುತ್ತೇನೆ. ಒಂದೋ ನಾನು ವಿರಾಮ ತೆಗೆದುಕೊಳ್ಳುತ್ತೇನೆ ಇಲ್ಲಾ ದೇಶ ಲೂಟಿಕೋರರಿಗೆ ವಿರಾಮ ನೀಡುತ್ತೇನೆ. ಅಂತವರಿಗೆ ಪಾಠ ಕಲಿಸಲು ಪ್ರತಿಯೊಬ್ಬರಿಗೂ ಇದು ಸಕಾಲ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.