ಉತ್ತರಾಖಂಡ್ ಮದರಸಾಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸಂಸ್ಕೃತ ಪಾಠ

First Published 11, Jan 2018, 12:31 PM IST
Uttarakhand madrasas plan to take up Sanskrit as a subject for Muslim students
Highlights

ಉತ್ತರಾಖಂಡ್ ಮದರಸಾಗಳಲ್ಲಿ ಸಂಸ್ಕೃತವನ್ನು ಹೇಳಿಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇಸ್ಲಾಮಿಕ್ ಶಾಲೆಗಳಾದ ಮದರಸಾಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ  ಯೋಜನೆ ಜಾರಿಗೆ ಬರುವ ಸಾಧ್ಯತೆಗಳಿವೆ.

ಉತ್ತರಾಖಂಡ್ (ಜ.11): ಉತ್ತರಾಖಂಡ್ ಮದರಸಾಗಳಲ್ಲಿ ಸಂಸ್ಕೃತವನ್ನು ಹೇಳಿಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇಸ್ಲಾಮಿಕ್ ಶಾಲೆಗಳಾದ ಮದರಸಾಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ  ಯೋಜನೆ ಜಾರಿಗೆ ಬರುವ ಸಾಧ್ಯತೆಗಳಿವೆ.

ಪ್ರಮುಖವಾಗಿ ಕೌಶಲ್ಯಾಧಾರಿತವಾದ ಆಯುರ್ವೇದ ಹಾಗೂ ಯೋಗ ಶಿಕ್ಷಣವನ್ನು ಹೇಳಿಕೊಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಮದರಸಾ ವೆಲ್ಫೇರ್ ಸೊಸೈಟಿಯಿಂದ  ಕೇಂದ್ರೀಯ ಯೋಜನೆಯಡಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸಂಸ್ಕೃತವನ್ನು ಹೇಳಿಕೊಡುವ ಕಾರ್ಯವನ್ನು ಅನುಷ್ಠಾನಗೊಳಿಸಲು ಕೇಳಿಕೊಳ್ಳಲಾಗಿತ್ತು.

ಒಟ್ಟು ರಾಜ್ಯದ ವಿವಿಧೆಡೆಯ ಮದರಸಾಗಳಲ್ಲಿ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಸಂಸ್ಕೃತ ಶಿಕ್ಷಕರನ್ನು ನೇಮಕ ಆಡುವಂತೆ ಪತ್ರ ಬರೆಯಲಾಗಿದೆ. 

loader