Asianet Suvarna News Asianet Suvarna News

'ಎಳೆದೊಯ್ಯಿರಿ ಈಕೆಯನ್ನು': ವರ್ಗಾವಣೆ ಕೋರಿದ ಶಿಕ್ಷಕಿ ಮೇಲೆ ಸಿಎಂ 'ದರ್ಬಾರ್'!

ವರ್ಗಾವಣೆ ಕೋರಿ ಮನವಿ ಸಲ್ಲಿಸಲು ಬಂದ ಶಿಕ್ಷಕಿ ಅರೆಸ್ಟ್

ಉತ್ತರಾಖಂಡ್ ಸಿಎಂ ಜನತಾ ದರ್ಬಾರ್ ನಲ್ಲಿ ಘಟನೆ

ಸಿಎಂ ಜೊತೆ ಅನುಚಿತ ವರ್ತನೆ ಆರೋಪ

ಸ್ಥಳದಲ್ಲೇ ಕೆಲಸದಿಂದ ವಜಾಗೊಂಡ ಶಿಕ್ಷಕಿ

Uttarakhand Chief Minister Snaps After Row With Teacher

ನವದೆಹಲಿ(ಜೂ.29): ವರ್ಗಾವಣೆ ಕೋರಿ ಉತ್ತರಾಖಂಡ್ ಸಿಎಂ ತ್ರಿವೇಂದ್ರ ರಾವತ್ ಬಳಿ ಮನವಿ ಸಲ್ಲಿಸಲು ಬಂದಿದ್ದ ಶಿಕ್ಷಕಿಯೋರ್ವರನ್ನು ಬಂಧಿಸಿದ ಘಟನೆ ನಡೆದಿದೆ. ಶಿಕ್ಷಕಿ ಮುಖ್ಯಮಂತ್ರಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದೇ ಆಕೆಯ ಬಂಧನಕ್ಕೆ ಕಾರಣ ಎನ್ನಲಾಗಿದೆ.

ಕಳೆದ 25 ವರ್ಷಗಳಿಂದ ಉತ್ತರಕಾಶಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉತ್ತರಾ ಬಹುಗುಣ, ತಮ್ಮ ಪತಿಯ ನಿಧನದ ಹಿನ್ನೆಲೆಯಲ್ಲಿ ತಮಗೆ ವರ್ಗಾವಣೆ ಬೇಕೆಂದು ಸಿಎಂಗೆ ಮನವಿ ಸಲ್ಲಿಸಿದ್ದರು. ಇದೇ ಕಾರಣಕ್ಕೆ ಸಿಎಂ ರಾವತ್ ಅವರನ್ನು ಭೇಟಿಯಾಗಲು ಬಂದಿದ್ದ ಉತ್ತರಾ ಅವರನ್ನು ಅನುಚಿತ ವರ್ತನೆ ಆರೋಪದ ಮೇಲೆ ಬಂಧಿಸುವಂತೆ ಸಿಎಂ ಪೊಲೀಸರಿಗೆ ಆದೇಶ ನೀಡಿದ್ದಾರೆ.

ಮನವಿ ಸಲ್ಲಿಸಲು ಬಂದಿದ್ದ ಉತ್ತರಾ ಸಿಎಂ ಜೊತೆ ವಾಗ್ವಾದಕ್ಕಿಳಿದ ಹಿನ್ನೆಲೆಯಲ್ಲಿ ಅವರನ್ನು ಸ್ಥಳದಲ್ಲೇ ಕೆಲಸದಿಂದ ವಜಾಗೊಳಿಸಿದ ಸಿಎಂ ರಾವತ್, ಕೂಡಲೇ ಉತ್ತರಾ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿದರು. ಸಿಎಂ ಆದೇಶದನ್ವಯ ಪೊಲೀಸರು ಉತ್ತರಾ ಅವರನ್ನು ಬಂಧಿಸಿ ಕರೆದೊಯ್ದರು. ಕೆಲ ಸಮಯದ ಬಳಿಕ ಪೊಲೀಸರು ಶಿಕ್ಷಕಿಯನ್ನು ಬಿಡುಗಡೆ ಮಾಡಿದ್ದಾರೆ.

ಗಂಡನನ್ನು ಕಳೆದುಕೊಂಡು ಏಕಾಂಗಿಯಾಗಿರುವ ಶಿಕ್ಷಕಿ ಉತ್ತರಾ, ರಾಜಧಾನಿ ಡೆಹ್ರಾಡೂನ್ ಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಇಂದು ಸಿಎಂ ಭೇಟಿಯಾಗಲು ಬಂದಿದ್ದ ಅವರು, ಮಾತಿನ ಚಕಮಕಿ ನಡೆಸಿ ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಉತ್ತರಾ, ಪತಿ ನಿಧನದ ಬಳಿಕ ತಮ್ಮ ಮಕ್ಕಲು ನೆಲೆಸಿರುವ ಡೆಹ್ರಾಡೂನ್ ಗೆ ವರ್ಗಾವಣೆ ಮಾಡಬೇಕೆಂದು ಕಳೆದ ಮೂರು ವರ್ಷಗಳಿಂದ ಆಗ್ರಹಿಸುತ್ತಿದ್ದೇನೆ. ಅದರಂತೆ ಇಂದು ನಡೆದ ಸಿಎಂ ಅವರ ಜನತಾ ದರ್ಬಾರ್ ನಲ್ಲಿ ಮನವಿ ಸಲ್ಲಿಸಲು ಬಂದಿದ್ದೆ. ಆದರೆ ಸಿಎಂ ನನ್ನ ಮನವಿ ಮನವಿ ಪುರಸ್ಕರಿಸದೇ ಕೆಲಸದಿಂದಲೇ ವಜಾಗೊಳಿಸಿದ್ದು ಖಂಡನೀಯ ಎಂದು ಹೇಳಿದರು.

Follow Us:
Download App:
  • android
  • ios