ಪ್ರತಿನಿತ್ಯ ಶಾಲಾ ಕಾಲೇಜಿಗೆ ಮಕ್ಕಳು ಹೋಗಬೇಕಾದರೆ ಅಂಗಡಿಗೆ, ಆಸ್ಪತ್ರೆಗೆ ತೆರಳಬೇಕಾದರೆ ದೋಣಿ ದಾಟೇ ಹೋಗಬೇಕಿತ್ತು. ಇನ್ನು ಮಳೆಗಾಲದಲ್ಲಂತೂ ಈ ಗ್ರಾಮದ ಜನರ ಪಾಡು ಹೇಳತೀರದ್ದು. ಅತಿಯಾಗಿ ಮಳೆಬಂದ ಸಂಧರ್ಭದಲ್ಲಂತೂ ಐಗಳಕೂರ್ವೆ ಗ್ರಾಮದ ಜನರು ಒಂದೆಡೆ ನೆರೆಯಿಂದ ಕಂಗಾಲಾಗುತ್ತಿದ್ದರೆ ಇನ್ನೊಂದೆಡೆ ನದಿ ದಾಟಿ ಬೇರೆ ಪ್ರದೇಶಕ್ಕೂ ಹೋಗಲಾರದೆ ಪರದಾಡುವಂತಾಗಿತ್ತು.

ಉತ್ತರ ಕನ್ನಡ(ಆ.23): ಅದು ಸುತ್ತಲು ನೀರಿನಿಂದ ಜಲಾವೃತವಾಗಿರುವ ನಡುಗಡ್ಡೆ. ಸಾವಿರಕ್ಕೂ ಅಧಿಕ ಜನರು ಇರುವ ಆ ಗ್ರಾಮಸ್ಥರು ಏನೇ ಕೆಲಸಕ್ಕೆ ಹೋಗಬೇಕಾದರೂ ದೋಣಿಯ ಮೂಲಕ ನದಿ ದಾಟೇ ಹೋಗಬೇಕಿತ್ತು. ಅಷ್ಟೆ ಅಲ್ಲ ಈ ಗ್ರಾಮದ ಯುವಕರಿಗೆ ಮದುವೆಯಾಗಲು ಹೆಣ್ಣನ್ನು ಕೊಡಲು ಹಿಂದು ಮುಂದು ನೋಡುತ್ತಿದ್ದರು.

ಪ್ರತಿನಿತ್ಯ ಶಾಲಾ ಕಾಲೇಜಿಗೆ ಮಕ್ಕಳು ಹೋಗಬೇಕಾದರೆ ಅಂಗಡಿಗೆ, ಆಸ್ಪತ್ರೆಗೆ ತೆರಳಬೇಕಾದರೆ ದೋಣಿ ದಾಟೇ ಹೋಗಬೇಕಿತ್ತು. ಇನ್ನು ಮಳೆಗಾಲದಲ್ಲಂತೂ ಈ ಗ್ರಾಮದ ಜನರ ಪಾಡು ಹೇಳತೀರದ್ದು. ಅತಿಯಾಗಿ ಮಳೆಬಂದ ಸಂಧರ್ಭದಲ್ಲಂತೂ ಐಗಳಕೂರ್ವೆ ಗ್ರಾಮದ ಜನರು ಒಂದೆಡೆ ನೆರೆಯಿಂದ ಕಂಗಾಲಾಗುತ್ತಿದ್ದರೆ ಇನ್ನೊಂದೆಡೆ ನದಿ ದಾಟಿ ಬೇರೆ ಪ್ರದೇಶಕ್ಕೂ ಹೋಗಲಾರದೆ ಪರದಾಡುವಂತಾಗಿತ್ತು.

ತಮ್ಮೂರಿಗೊಂದು ಸೇತುವೆ ನಿರ್ಮಾಣವಾಗಿ ನದಿಯಲ್ಲಿ ದಾಟುವ ಜೀವನ ಅಂತ್ಯಗೊಳ್ಳಬೇಕು ಅನ್ನೋದು ಸುಮಾರು 150 ಮನೆಗಳಿರುವ ಗ್ರಾಮದ 1500ಕ್ಕೂ ಅಧಿಕ ಜನರ 50ಕ್ಕೂ ಅಧಿಕ ವರ್ಷದ ಕನಸಾಗಿತ್ತು. ಇದೀಗ ಈಡೇರುವ ಕಾಲ ಸನ್ನಿಹಿತವಾಗಿದೆ. ಗ್ರಾಮದ ಜನರ ಸುಮಾರು ವರ್ಷದ ಸಮಸ್ಯೆ ಅರಿತ ಸರ್ಕಾರ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಲು ಮುಂದಾಗಿದೆ.

ಸೇತುವೆ ಮಂಜೂರಾಗಿರುವುದರಿಂದ ತಮ್ಮ ಸಮಸ್ಯೆಯೆಲ್ಲಾ ಪರಿಹಾರವಾದಂತಾಗಿ ಆದಷ್ಟು ಬೇಗ ಸೇತುವೆ ನಿರ್ಮಾಣ ಗೊಂಡು ನಮ್ಮ ಕನಸು ಈಡೇರಲಿ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.ಜೊತೆಗೆ ನಮ್ಮ ಆಶಯ ಕೂಡ.

ವರದಿ: ಕಡತೋಕಾ ಮಂಜು, ಸುವರ್ಣ ನ್ಯೂಸ್