ಲಕ್ನೋ[ಜೂ.23] ರಜೆ ಕೇಳಿದ್ದಕ್ಕೆ ಹಿರಿಯ ಅಧಿಕಾರಿ ರಜೆ ನೀಡದಿದ್ದಾಗ ಆತ್ಮಹತ್ಯೆ ಲೆಟರ್ ಬರೆದ ಸುದ್ದಿಯನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲೊಬ್ಬ ಉತ್ತರ ಪ್ರದೇಶದ ಪೇದೆಗೆ ಆತನ ಹಿರಿಯ ಅಧಿಕಾರಿ ರಜೆ ನೀಡಿದ ಕಾರಣ ವಿಚಿತ್ರವಾಗಿದೆ. ಆತನ ರಜಾ ಅರ್ಜಿ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಹಾಗಾದರೆ ರಜೆ ಕೇಳಲು ಆತ ನೀಡಿದ ಕಾರಣ ಏನು? ಮುಂದಕ್ಕೆ ಓದಿ

 ಮಹೋಬಾ ಕೋಟಿವಾಲ್ ಸ್ಟೇಶನ್‌ನ ಪೇದೆ ತನ್ನ ಸಂಸಾರ ‘ವಿಸ್ತರಣೆ’ ಮಾಡುವ ಮಹದುದ್ದೇಶದಿಂದ 30 ದಿನಗಳ ರಜೆ ಕೇಳಿದ್ದಾರೆ. ಇದನ್ನು ಒಪ್ಪಿಕೊಂಡ ಇನ್ಸ್‌ಪೆಕ್ಟರ್ ಜುನ್ 23 ರಿಂದ ಅನ್ವಯವಾಗುವಂತೆ ಬರೋಬ್ಬರಿ 45 ದಿನಗಳ ರಜೆ ದಯಪಾಲಿಸಿದ್ದಾರೆ.

ಅರ್ಜಿ ಹಾಕಿದ ಸೋಮ್ ಸಿಂಗ್‌ಗೆ ಸಖತ್ ಖುಷಿಖುಷಿಯಾಗಿ ಮನೆಗೆ ಹೋಗಿದ್ದಾರೆ. ಆದರೆ ಮೊದಲು ಸಂಸಾರ ಮಾಡಲು  ಎಂದು ನೀಡಿದ್ದ ಕಾರಣವನ್ನು ಹಿರಿಯ ಅಧಿಕಾರಿಗಳ ಒತ್ತಡದ ಮೇರೆಗೆ ಬದಲಾಯಿಸಲಾಗಿದೆಯಂತೆ!