ಲಕ್ನೋ(ಆ.21): ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಸಂಪುಟ ಪುನರ್ ರಚನೆ ಮಾಡಲಾಗಿದೆ.

ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಈ ಬಾರಿ ಬರೋಬ್ಬರಿ 23 ಹೊಸ ಶಾಸಕರಿಗೆ ಯೋಗಿ ಸಚಿವ ಸ್ಥಾನ ಕರುಣಿಸಿ ಗಮನ ಸೆಳೆದಿದ್ದಾರೆ.

ಇಂದು ರಾಜಭವನದಲ್ಲಿ 23 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲೆ ಆನಂದಿಬೆನ್ ಪಟೇಲ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

6 ಶಾಸಕರು ಸಂಪುಟ ದರ್ಜೆ ಸಚಿವರಾಗಿ,  6 ಶಾಸಕರು ರಾಜ್ಯ ಸ್ವತಂತ್ರ ಪ್ರಭಾರ ಸಚಿವರಾಗಿ ಮತ್ತು 11 ಶಾಸಕರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವುದು ವಿಶೇಷ.

ಇದೇ ವೇಳೆ ಪ್ರಸ್ತುತ ನಾಲ್ವರು ರಾಜ್ಯ ಖಾತೆ ಸಚಿವರಿಗೆ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗಿದೆ.