ಅಮೆರಿಕದ ಉಟಾಹ್‌ ರಾಜ್ಯದ ಎಲ್ಲ ವಕೀಲರಿಗೆ ಟಾಪ್‌ಲೆಸ್‌ ಮಹಿಳೆಯ ಚಿತ್ರವಿರುವ ಇಮೇಲ್‌ ಒಂದು ತಲುಪಿದ್ದು, ಇದು ವಕೀಲರನ್ನು ಅವಾಕ್ಕಾಗಿಸಿದೆ.

ಅಮೆರಿಕ : ಅಮೆರಿಕದ ಉಟಾಹ್‌ ರಾಜ್ಯದ ಎಲ್ಲ ವಕೀಲರಿಗೆ ಟಾಪ್‌ಲೆಸ್‌ ಮಹಿಳೆಯ ಚಿತ್ರವಿರುವ ಇಮೇಲ್‌ ಒಂದು ತಲುಪಿದ್ದು, ಇದು ವಕೀಲರನ್ನು ಅವಾಕ್ಕಾಗಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಟಾಹ್‌ ಸ್ಟೇಟ್‌ ಬಾರ್‌ ಅಸೋಶಿಯೇಶನ್‌ನ ವಾರ್ಷಿಕ ಚಳಿಗಾಲದ ಸಮಾವೇಶಕ್ಕೆ ರಾಜ್ಯದ ಎಲ್ಲಾ ವಕೀಲರನ್ನು ಆಹ್ವಾನಿಸಲು ಇಮೇಲ್‌ ಸಂದೇಶವೊಂದನ್ನು ಕಳಿಸಿದ್ದು, ಆ ಸಂದೇಶದ ಜತೆ ಟಾಪ್‌ಲೆಸ್‌ ಮಹಿಳೆಯ ಫೋಟೋ ಕೂಡಾ ಅಟಾಚ್‌ ಆಗಿತ್ತು! ಘಟನೆಯಿಂದ ಮುಜುಗರಕ್ಕೊಳಗಾದ ಅಸೋಶಿಯೇಶನ್‌ ತಕ್ಷಣವೇ ಎಚ್ಚೆತ್ತು ‘ಯಾರಿಗೆಲ್ಲಾ ಈ ಅನುಚಿತ ಸಂದೇಶ ತಲುಪಿದೆಯೋ ಎಲ್ಲರ ಬಳಿ ಕ್ಷಮೆಯಾಚಿಸುತ್ತೇವೆ.

ಈ ರೀತಿಯ ಅಸಭ್ಯ ಸಂದೇಶ ಹೇಗೆ ತಲುಪಿತು ಎಂಬ ಬಗ್ಗೆ ತನಿಖೆ ಮಾಡಲಾಗುತ್ತದೆ’ ಎಂದು ಟ್ವೀಟ್‌ ಮೂಲಕ ಕ್ಷಮೆ ಕೇಳಿದೆ. ಸದ್ಯ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.