ರಾಜಕೀಯಕ್ಕಾಗಿ ದೇವಾಲಯಕ್ಕೆ ಭೇಟಿ ಮಾಡುವುದಿಲ್ಲ : ಖಾದರ್

UT Khedar Slams Kalladka Prabhakar Bhat
Highlights

ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ  ಸಚಿವ ಖಾದರ್ ತಿರುಗೇಟು ನೀಡಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನಗೆ ಎಲ್ಲಾ ಧಾರ್ಮಿಕ ಕೇಂದ್ರಗಳಿಂದಲೂ ಕೂಡ ಕರೆ ಬರುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರು : ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ  ಸಚಿವ ಖಾದರ್ ತಿರುಗೇಟು ನೀಡಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನಗೆ ಎಲ್ಲಾ ಧಾರ್ಮಿಕ ಕೇಂದ್ರಗಳಿಂದಲೂ ಕೂಡ ಕರೆ ಬರುತ್ತಿದೆ ಎಂದು ಹೇಳಿದ್ದಾರೆ.

ನೀವು ಅದನ್ನೆಲ್ಲಾ ಮನಸ್ಸಿನಲ್ಲಿ ಇರಿಸಿಕೊಳ್ಳದೇ ನಮ್ಮಲ್ಲಿಗೆ ಬರಬೇಕು ಎನ್ನುತ್ತಾರೆ. ಒತ್ತಾಯಪೂರ್ವಕವಾಗಿ ಎಲ್ಲಾ ಜಾತಿ ಧರ್ಮದ ದೇವಾಲಯಗಳಿಗೆ ಕರೆಯುತ್ತಿದ್ದಾರೆ.

ಉಮ್ರಾ ಯಾತ್ರೆಯಿಂದ ಬಂದ ದಿನವೇ ನನ್ನನ್ನು ಕೊರಗಜ್ಜನ ದೇವಸ್ಥಾನಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೇ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ನನ್ನ ಪರವಾಗಿ ಪ್ರಾರ್ಥಿಸಿದ್ದಾರೆ.

ನನ್ನ ಬಗ್ಗೆ ಟೀಕಿಸುವವರಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರಭಾಕರ ಭಟ್ ಟೀಕೆ ನಂತರ ಧಾರ್ಮಿಕ ಕೇಂದ್ರಗಳಿಗೆ ನನ್ನ ಡಿಮ್ಯಾಂಡ್ ಜಾಸ್ತಿಯಾಗಿದೆ. ಚುನಾವಣೆ ಸಂಧರ್ಭದ ಅವರ ಗೊಂದಲ ಗಳಿಗೆ ನಾವು ಬಲಿಯಾಗಲ್ಲ.  

ಅವರು ಶಕುನಿಯಾಗಿದ್ದರೆ, ನಾವು ಚಾಣಕ್ಯರಾಗಿದ್ದೇವೆ ನಾನು ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹೋಗುವುದು ರಾಜಕೀಯಕ್ಕೋಸ್ಕರ ಅಲ್ಲ. ಒಂದು ಧರ್ಮದವರು ಇನ್ನೂಂದು ಧರ್ಮದ ದೇವಸ್ಥಾನಕ್ಕೆ ಹೋಗುವುದು ಬೇಡ ಎನ್ನುವವರಿಗೆ ಈ ದೇಶದ ಸಂಸ್ಕೃತಿ ಗೊತ್ತಿಲ್ಲ.

ಅವರು ದೇಶದ ಸಂಸ್ಕೃತಿ ಮತ್ತು ಚಿಂತನೆಗೆ ಮಾರಕವಾದ ವ್ಯಕ್ತಿಗಳಾಗಿದ್ದಾರೆ. ನಿಜವಾದ ದೇಶಪ್ರೇಮಿ ಭಾರತೀಯರು ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಸಚಿವ ಖಾದರ್ ಸುವರ್ಣ ನ್ಯೂಸ್’ಗೆ ಪ್ರತಿಕ್ರಿಯೆ ನೀಡಿದ್ದಾರೆ.

loader