ಇಂದು ವಿದೇಶದಿಂದ ವಾಪಸಾಗುತ್ತಿದ್ದ ಸಚಿವ ಯು.ಟಿ ಖಾದರ್ ಮಂಗಳೂರಿನಲ್ಲಿ 2 ದಿನಗಳ ಕಾಲ ಪ್ರವಾಸ ಕೈಗೊಳ್ಳಲು ತೀರ್ಮಾನ ಮಾಡಿದ್ದರು. ಆದರೆ  ಕಡಲತಡಿಯಲ್ಲಿ ಚಂಡಮಾರುತದ ಅಬ್ಬರ ಇರುವ ನಿಟ್ಟಿನಲ್ಲಿ ಪ್ರವಾಸ ರದ್ದು ಮಾಡಿದ್ದಾರೆ.

ಮಂಗಳೂರು(ಡಿ.3): ಮಂಗಳೂರಿನ ಕಡಲ ತಡಿಗೂ ಕೂಡ ಓಖಿ ಚಂಡ ಮಾರುತದ ಅಬ್ಬರ ತಟ್ಟಿದ್ದು, ಈ ನಿಟ್ಟಿನಲ್ಲಿ ಸಚಿವ ಯು.ಟಿ ಖಾದರ್ ಅವರು ತಮ್ಮ ಪ್ರವಾಸವನ್ನು ರದ್ದು ಮಾಡಿದ್ದಾರೆ.

 ಇಂದು ವಿದೇಶದಿಂದ ವಾಪಸಾಗುತ್ತಿದ್ದ ಅವರು ಮಂಗಳೂರಿನಲ್ಲಿ 2 ದಿನಗಳ ಕಾಲ ಪ್ರವಾಸ ಕೈಗೊಳ್ಳಲು ತೀರ್ಮಾನ ಮಾಡಿದ್ದರು. ಆದರೆ ಕಡಲತಡಿಯಲ್ಲಿ ಚಂಡಮಾರುತದ ಅಬ್ಬರ ಇರುವ ನಿಟ್ಟಿನಲ್ಲಿ ಪ್ರವಾಸ ರದ್ದು ಮಾಡಿದ್ದಾರೆ. ಉಳ್ಳಾಲದಲ್ಲಿ ಓಖಿ ಚಂಡಮಾರುತ ಜೋರಾಗಿದ್ದು, ಸೋಮೇಶ್ವರದ ಬಳಿಯೂ ಕೂಡ ಅಲೆಗಳು ರಭಸದಿಂದ ಬೀಸತೊಡಗಿವೆ. ಇದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಹಸಿಲ್ದಾರ್'ಗೆ ಸೂಚನೆ ನೀಡಿದ್ದಾರೆ.