ಆಹಾರ ಸಚಿವ ಯುಟಿ ಖಾದರ್ ನಿನ್ನೆ ಟ್ರಾಫಿಕ್ ಪೊಲೀಸ್ ಆಗಿದ್ದರು! ಅಚ್ಚರಿಯಾದರೂ ಇದು ನಿಜ. ನಿನ್ನೆ ಧಾರವಾಡದಲ್ಲಿ ಕಾರ್ಯಕ್ರಮ ಮುಗಿಸಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಮುಖಾಂತರ ಬೆಂಗಳೂರಿಗೆ ಹೊರಡುವಾಗ ಟ್ರಾಫಿಕ್ ಜಾಮ್ ಆಗಿತ್ತು. ಕೊನೆಗೆ ಸಚಿವರೇ ತಮ್ಮ ಕಾರಿಂದ ಇಳಿದು ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಮುಂದಾದರು.
ಬೆಳಗಾವಿ(ಜ.28): ಆಹಾರ ಸಚಿವ ಯುಟಿ ಖಾದರ್ ನಿನ್ನೆ ಟ್ರಾಫಿಕ್ ಪೊಲೀಸ್ ಆಗಿದ್ದರು! ಅಚ್ಚರಿಯಾದರೂ ಇದು ನಿಜ. ನಿನ್ನೆ ಧಾರವಾಡದಲ್ಲಿ ಕಾರ್ಯಕ್ರಮ ಮುಗಿಸಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಮುಖಾಂತರ ಬೆಂಗಳೂರಿಗೆ ಹೊರಡುವಾಗ ಟ್ರಾಫಿಕ್ ಜಾಮ್ ಆಗಿತ್ತು.
ಕೊನೆಗೆ ಸಚಿವರೇ ತಮ್ಮ ಕಾರಿಂದ ಇಳಿದು ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಮುಂದಾದರು. ಆದರೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿಲ್ಲ . ಕೊನೆಗೆ ವಿಮಾನ ಹೊರಡುವ ಸಮಯ ಹತ್ತಿರವಾಗುತ್ತಿದ್ದಂತೆ ಅಪರಿಚಿತರ ವಾಹನದಲ್ಲಿ ಸಚಿವರು ಲಿಫ್ಟ್ ತೆಗೆದುಕೊಂಡರು.
