Asianet Suvarna News Asianet Suvarna News

ಮೊಬೈಲ್ ಬಳಸುತ್ತಾ ವಾಹನ ಚಾಲನೆ: 2138 ಬಲಿ..!

ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಕೆಯಿಂದಾಗಿ 2016ರಲ್ಲಿ ಒಟ್ಟು 4976 ರಸ್ತೆ ಅಪಘಾತಗಳು ಸಂಭವಿಸಿದ್ದು, 2138 ಮಂದಿ ಬಲಿಯಾಗಿದಾರೆ.

Using mobile phone while driving killed 2138 in 2016

ನವದೆಹಲಿ(ಸೆ.08): ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬೇಡಿ ಎಂದು ಸರ್ಕಾರಗಳು ಎಚ್ಚರಿಕೆಗಳನ್ನು ನೀಡುತ್ತಿದ್ದರೂ ಅದಕ್ಕೆ ಜನರು ಕಿವಿಗೊಟ್ಟಂತೆ ಕಾಣುತ್ತಿಲ್ಲ. ಆದರೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ರಸ್ತೆ ಅಪಘಾತಗಳ ವಾರ್ಷಿಕ ಅಂಕಿ-ಅಂಶಗಳ ಪ್ರಕಾರ ಎರಡು ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಅಫಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಅಂಶ ಹೊರಬಿದ್ದಿದೆ.

ಮೊಬೈಲ್ ಬಳಸುತ್ತಲೇ ವಾಹನ ಚಲಾಯಿಸಿದ ಪರಿಣಾಮ ಕಳೆದ ವರ್ಷ 2,138 ಮಂದಿ ಮೃತಪಟ್ಟಿದಾರೆ ಎಂಬ ಅಂಶ ಕೇಂದ್ರ ಸರ್ಕಾರದ ರಸ್ತೆ ಅಪಘಾತಗಳ ವಾರ್ಷಿಕ ವರದಿಯಿಂದ ಬಯಲಾಗಿದೆ.

ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಕೆಯಿಂದಾಗಿ 2016ರಲ್ಲಿ ಒಟ್ಟು 4976 ರಸ್ತೆ ಅಪಘಾತಗಳು ಸಂಭವಿಸಿದ್ದು, 2138 ಮಂದಿ ಬಲಿಯಾಗಿದಾರೆ. ಅಲ್ಲದೇ 4,746 ಮಂದಿ ಗಾಯಗೊಂಡಿದ್ದಾರೆ.

ರಾಂಗ್ ಸೈಡ್'ನಲ್ಲಿ ವಾಹನ ಚಲಾಯಿಸಿದ ಪರಿಣಾಮ 17,654 ರಸ್ತೆ ಅಪಘಾತ ಸಂಭವಿಸಿ 5705 ಮಂದಿ ಮೃತಪಟ್ಟಿದಾರೆ. ದೇಶದಲ್ಲಿ ಪ್ರತೀ ಗಂಟೆಗೆ ಸರಾಸರಿ 17 ಮಂದಿ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ.

Follow Us:
Download App:
  • android
  • ios