ವಾಷಿಂಗ್ಟನ್(ಸೆ.29): ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಇರಾಕ್'ನಲ್ಲಿರುವ ಐಎಸ್'ಐಎಸ್ ನಾಶಕ್ಕೆ ಹೆಚ್ಚುವರಿಯಾಗಿ 600 ಅಮೆರಿಕಾ ಯೋಧರನ್ನು ಕಳುಹಿಸಲು ನಿರ್ಧರಿಸಿದೆ. ಈ ಯೋಧರು ಇರಾಕಿ ಪಡೆಗಳ ಜೊತೆ ಬೆರತು ಐಎಸ್ ವಶದಲ್ಲಿರುವ ಮಸೂಲ್ ಪಟ್ಟಣವನ್ನು ಮರುವಶಪಡೆಯಲು ಸಹಕರಿಸಲಿದ್ದಾರೆ.
ಶೀಘ್ರದಲ್ಲೇ 5 ಸಾವಿರ ಯೋಧರು ಐಎಸ್'ಅನ್ನು ಧ್ವಂಸಗೊಳಿಸಲು ಇರಾಕಿಗೆ ತೆರಳಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಒಬಾಮ ಆಡಳಿತ 7 ವರ್ಷಗಳ ನಂತರ ಎಲ್ಲ ಅಮೆರಿಕಾ ಯೋಧರನ್ನು ವಾಪಸ್ ಕರೆಸಿಕೊಂಡಿತ್ತು. ಅಮೆರಿಕಾ ಅಧ್ಯಕ್ಷರ ನಿರ್ಧಾರವನ್ನು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.
ನೂತನವಾಗಿ ಸೇರ್ಪಡೆಗೊಳ್ಳುವ ಯೋಧರು ಐಎಸ್ ವಶದಲ್ಲಿರುವ ಮಸೂಲ್ ಪಟ್ಟಣವನ್ನು ವಶಪಡಿಸಿಕೊಳ್ಳಲು ಇರಾಕಿ ಪಡೆಗೆ ಜಾರಿ ವ್ಯವಸ್ಥೆ, ಬೇಹುಗಾರಿಕೆಗೆ ಸಹಾಯ ನೀಡಲಿದ್ದಾರೆ' ಎಂದು ರಕ್ಷಣಾ ಕಾರ್ಯದರ್ಶಿ ಆಸ್ಟೋನ್ ಬಿ ಕಾರ್ಟ್'ರ್ ತಿಳಿಸಿದ್ದಾರೆ.
ಒಬಾಮ ಅವರು 2008ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇರಾಕ್'ನಲ್ಲಿರುವ ಅಮೆರಿಕಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದರೆ ತಮ್ಮ ದೇಶದ ಪಡೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅಮೆರಿಕಾ ಸರ್ಕಾರ ಈ ವರ್ಷದಿಂದ ಮಧ್ಯಪ್ರಾಚ್ಯದಲ್ಲಿ ಐಎಸ್' ನಾಶಕ್ಕೆ 30 ಸಾವಿರ ಯೋಧರನ್ನು ನಿಯೋಜಿಸಿದೆ.
