ಉತ್ತರ ಕೊರಿಯಾ ಅಂತರರಾಷ್ಟ್ರೀಯ ಸಮುದಾಯದ ಸಲಹೆಯನ್ನು ಧಿಕ್ಕರಿಸಿ ಜಲಜನಕ ಸೇರಿದಂತೆ ವಿವಿಧ ರೀತಿಯ ಕ್ಷಿಪಣಿಗಳನ್ನು ಉಡಾಯಿಸಿದೆ. ಜಪಾನ್'ನನ್ನು ಮುಳಿಗಿಸಿ ಅಮೆರಿಕಾವನ್ನು ಬೂದಿ ಮಾಡುವುದಾಗಿ ಅಬ್ಬರಿಸಿದೆ.
ವಾಷಿಂಗ್ಟ'ನ್(ಸೆ.16): ಅಮೆರಿಕಾವು ಉತ್ತರ ಕೊರಿಯಾಗೆ ಬೆದರಿಕೆ ಹಾಕುವುದನ್ನು ನಿಲ್ಲಿಸದಿದ್ದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ಅಮೆರಿಕಾದಲ್ಲಿನ ಚೀನಾದ ರಾಯಭಾರಿ ಎಚ್ಚರಿಸಿದ್ದು, ಕೊರಿಯಾವು 2ನೇ ಬಾರಿಗೆ ಜಪಾನ್'ನ ಪೆಸಿಫಿಕ್ ಸಮುದ್ರದ ಮೇಲೆ ಬೆನ್ನಲ್ಲೆ ಈ ಹೇಳಿಕೆ ನೀಡಿರುವುದು ಹೆಚ್ಚು ಮಹತ್ವ ಪಡೆದಿದೆ.
ರಾಯಭಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಕುಯಿ ತಿಯಾಂಕೈ, ದಿನದಿಂದ ದಿನಕ್ಕೆ ಎರಡೂ ದೇಶಗಳ ನಡುವೆ ಶೀತಲ ಸಮರ ಹೆಚ್ಚಾಗುತ್ತಿದೆ. ಪ್ರಮಾಣಿಕವಾಗಿ ಹೇಳುತ್ತೇನೆ ಅಮೆರಿಕಾ ಸಂಯುಕ್ತ ಸಂಸ್ಥಾನವು ಬೆದರಿಕೆಯೊಡ್ಡುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಇದರಿಂದ ವಿಶ್ವದ ಇತರ ದೇಶಗಳಿಗೂ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಬೆದರಿಸುವುದನ್ನು ಬಿಟ್ಟು ಮಾತುಕತೆ ಹಾಗೂ ಸಮಾಲೋಚನೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ' ಎಂದಿದ್ದಾರೆ.
ಉತ್ತರ ಕೊರಿಯಾ ಅಂತರರಾಷ್ಟ್ರೀಯ ಸಮುದಾಯದ ಸಲಹೆಯನ್ನು ಧಿಕ್ಕರಿಸಿ ಜಲಜನಕ ಸೇರಿದಂತೆ ವಿವಿಧ ರೀತಿಯ ಕ್ಷಿಪಣಿಗಳನ್ನು ಉಡಾಯಿಸಿದೆ. ಜಪಾನ್'ನನ್ನು ಮುಳಿಗಿಸಿ ಅಮೆರಿಕಾವನ್ನು ಬೂದಿ ಮಾಡುವುದಾಗಿ ಅಬ್ಬರಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆರೆಯ ದೇಶದ ಮೇಲೆ ರಾಜತಾಂತ್ರಿಕ ಹಾಗೂ ಆರ್ಥಿಕವಾಗಿ ಕಠಿಣ ಕ್ರಮಗಳನ್ನು ಹೇರಬೇಕೆಂದು ಒತ್ತಾಯಿಸಿದೆ.
ಅಮೆರಿಕಾವು ನಮ್ಮದೇಶದ ವಸ್ತುಗಳ ಮೇಲೆ ನಿರ್ಬಂಧ ವಿಧಸಿದರೆ ಅಲ್ಲಿನ ನಾಗರಿಕರೆ ಸಂಕಷ್ಟ ಎದುರಿಸಬೇಕಾತ್ತದೆ ವಿನಃ ಚೀನಾಕ್ಕೆ ಹೆಚ್ಚಿನ ತೊಂದರೆಯಾಗುವುದಿಲ್ಲ' ಎಂದು ಕುಯಿ ತಿಯಾಂಕೈ ತಿಳಿಸಿದ್ದಾರೆ.
