'ಭಾರತದ ಅಣ್ವಸ್ತ್ರ ತಯಾರಿಕೆಗೆ ತಡೆಯೊಡ್ಡಿ': ಮುಷರಫ್

First Published 27, May 2018, 4:42 PM IST
US should oppose India's Nuclear plans: Pervez Musharraf
Highlights

ಅಣ್ವಸ್ತ್ರ ತಯಾರಿಕೆ ಮೇಲೆ ನಿರ್ಭಂಧ ಹೇರುವಂತೆ ವಿಶ್ವ ಸಮುದಾಯ ಭಾರತದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಆರೋಪಿಸಿದ್ದಾರೆ.

ಇಸ್ಲಾಮಾಬಾದ್(ಮೇ.27): ಅಣ್ವಸ್ತ್ರ ತಯಾರಿಕೆ ಮೇಲೆ ನಿರ್ಭಂಧ ಹೇರುವಂತೆ ವಿಶ್ವ ಸಮುದಾಯ ಭಾರತದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಆರೋಪಿಸಿದ್ದಾರೆ.

ಉಪಖಂಡದಲ್ಲಿ ತ್ವೇಷಮಯ ವಾತಾವರಣ ಇರಲು ಭಾರತದ ಅನಿಯಂತ್ರಿತ ಅಣ್ವಸ್ತ್ರ ಸಂಗ್ರಹಣೆಯೇ ಕಾರಣ ಎಂದಿರುವ ಮುಷರಫ್, ಈ ಕುರಿತು ಭಾರತದ ಮೇಲೆ ವಿಶ್ವ ಸಮುದಾಯ ಒತ್ತಡ ಹಾಕುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರವಾಗಲು ಭಾರತದ ನಿರಂತರ ಬೆದರಿಕೆಯೇ ಕಾರಣವಾಗಿದ್ದು, ಅಶಾಂತಿಗೆ ಪಾಕಿಸ್ತಾನದತ್ತ ಬೊಟ್ಟು ಮಾಡುವ ಬದಲು ಭಾರತದ ಮೇಲೆ ಒತ್ತಡ ಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಅಮೆರಿಕವನ್ನು ಬೆನ್ನಿಗೆ ಚೂರಿ ಹಾಕುವ ಮಿತ್ರ ಎಂದು ಬಣ್ಣಿಸಿರುವ ಮುಷರಫ್, ತನಗೆ ಅಗತ್ಯವಿದ್ದ ಸಂದರ್ಭದಲ್ಲಿ ಪಾಕಿಸ್ತಾನವನ್ನು ಬಳಸಿಕೊಂಡ ಅದು, ಇದೀಗ ಭಾರತದತ್ತ ವಿಶೇಷ ಸ್ನೇಹ ತೋರಿಸುತ್ತಿದೆ ಎಂದಿದ್ದಾರೆ. ಪಾಕ್ ಬೆಂಬಲವಿಲ್ಲದೇ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಾಧ್ಯವಿಲ್ಲ ಎಂಬುದನ್ನು ಅಮೆರಿಕ ಮನಗಾಣಬೇಕಿದೆ. ಈ ಹಿನ್ನೆಲೆಯಲ್ಲಿ ಭಾರತ ಹೇಳಿದ್ದಕ್ಕೆಲ್ಲ ಕುಣಿಯದೇ ಪಾಕಿಸ್ತಾನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಅವರು ಭಿಪ್ರಾಯಪಟ್ಟಿದ್ದಾರೆ.

loader