Asianet Suvarna News Asianet Suvarna News

ಭಾರತಕ್ಕೆ ನ್ಯಾಟೋ ಮಿತ್ರರ ಸ್ಥಾನ: ಅಮೆರಿಕ ಮೇಲ್ಮನೆ ಸಮ್ಮತಿ

ಭಾರತಕ್ಕೆ ನ್ಯಾಟೋ ಮಿತ್ರರ ಸ್ಥಾನ: ಅಮೆರಿಕ ಮೇಲ್ಮನೆ ಅನುಮೋದನೆ| ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕಕ್ಕೆ ಮತ್ತಷ್ಟುಸನಿಹವಾಗುವ ಭಾರತದ ಯತ್ನಕ್ಕೆ ಇನ್ನೊಂದು ಜಯ ಸಿಕ್ಕಂತಾಗಿದೆ.

US Senate clears proposal to bring India on a par with its Nato allies
Author
Bangalore, First Published Jul 3, 2019, 10:59 AM IST

ವಾಷಿಂಗ್ಟನ್‌[ಜು.03]: ಭಾರತಕ್ಕೆ ನ್ಯಾಟೋ ಆಪ್ತ ದೇಶಗಳ ಸ್ಥಾನಮಾನ ನೀಡುವ ಶಾಸನಾತ್ಮಕ ಮಸೂದೆಯೊಂದಕ್ಕೆ ಅಮೆರಿಕ ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ ಅನುಮೋದನೆ ನೀಡಿದೆ. ಇದರೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕಕ್ಕೆ ಮತ್ತಷ್ಟುಸನಿಹವಾಗುವ ಭಾರತದ ಯತ್ನಕ್ಕೆ ಇನ್ನೊಂದು ಜಯ ಸಿಕ್ಕಂತಾಗಿದೆ.

‘ದ ನ್ಯಾಷನಲ್‌ ಡಿಫೆನ್ಸ್‌ ಆಥರೈಸೇಷನ್‌ ಆಕ್ಟ್’ ಎಂದು ಕರೆಯಲಾಗುವ ಮಸೂದೆಯನ್ನು ಸಂಸದರಾದ ಜಾನ್‌ ಕಾರ್ನಿನ್‌, ಮಾರ್ಕ್ ವಾರ್ನರ್‌ ಮೊದಲಾದವರು ಮಂಡಿಸಿದ್ದರು. ಆ ಶಾಸನಾತ್ಮಕ ಅವಕಾಶಕ್ಕೆ ಮೇಲ್ಮನೆ ಕಳೆದ ವಾರ ತನ್ನ ಅನುಮೋದನೆ ನೀಡಿದೆ. ಶೀಘ್ರವೇ ಇದೇ ಪ್ರಸ್ತಾವವನ್ನು ಸಂಸತ್ತಿನ ಕೆಳಮನೆಯಾದ ಹೌಸ್‌ ಆಫ್‌ ರೆಪ್ರಸೆಂಟೇಟಿವ್‌್ಸನಲ್ಲಿ ಮಂಡಿಸಲಾಗುವುದು. ಅಲ್ಲಿಯೂ ಪ್ರಸ್ತಾವನೆಗೆ ಅನುಮೋದನೆ ಲಭಿಸಿ ಅದಕ್ಕೆ ಕಾನೂನಿನ ಮಾನ್ಯತೆ ಸಿಗಲಿದೆ.

ಲಾಭ ಏನು?: ಭಾರತಕ್ಕೆ ನ್ಯಾಟೋ ಒಕ್ಕೂಟದ ಆಪ್ತ ದೇಶದ ಸ್ಥಾನಮಾನ ಸಿಕ್ಕರೆ, ಅಮೆರಿಕ ಸೇರಿದಂತೆ ನ್ಯಾಟೋ ದೇಶಗಳ ರಕ್ಷಣಾ ಸಲಕರಣೆಗಳ ಖರೀದಿ ಸುಲಭವಾಗುತ್ತದೆ. ಜೊತೆಗೆ ಹಿಂದೂ ಮಹಾಸಾಗರ ಸಮುದ್ರ ವಲಯದಲ್ಲಿ ಮಾನವೀಯ, ಉಗ್ರ ನಿಗ್ರಹ ಮತ್ತು ಕಡಲ್ಗಳ್ಳರ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಅಮೆರಿಕದ ನೆರವು ಸಿಗಲಿದೆ.

2016ರಲ್ಲಿ ಅಮೆರಿಕವು ಭಾರತಕ್ಕೆ ಮುಖ್ಯ ರಕ್ಷಣಾ ಪಾಲುದಾರ ಎಂಬ ಸ್ಥಾನಮಾನ ನೀಡಿತ್ತು. ತದನಂತರದಲ್ಲಿ ಅಮೆರಿಕದ ಅತ್ಯಾಧುನಿಕ ಮತ್ತು ಸೂಕ್ಷ್ಮ ತಂತ್ರಜ್ಞಾನ ಒಳಗೊಂಡ ರಕ್ಷಣಾ ಉಪಕರಣಗಳನ್ನು ಭಾರತವು ಖರೀದಿಸಲು ಸಾಧ್ಯವಾಗಿತ್ತು.

Follow Us:
Download App:
  • android
  • ios