ಭಾರತೀಯರಿಗೆ ಶಾಕ್ ನೀಡಲು ಅಮೆರಿಕ ಅಧ್ಯಕ್ಷ  ಡೋನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ದೇಶದಲ್ಲಿ ಕಾರ್ಯನಿರ್ವಹಿಸುವ ಎಚ್‌1ಬಿ ವೀಸಾದಾರರ ಸಂಗಾತಿಗಳಿಗೆ ಹಾಗೂ 21 ವರ್ಷ ಮೇಲ್ಪಟ್ಟಮಕ್ಕಳಿಗೆ ನೀಡಲಾಗುವ ಎಚ್‌4 ‘ನೌಕರಿ ವೀಸಾ’ವನ್ನು ರದ್ದುಗೊಳಿಸುವುದಾಗಿ ಇಲ್ಲಿನ ಫೆಡರಲ್‌ ನ್ಯಾಯಾಲಯಕ್ಕೆ ಟ್ರಂಪ್‌ ಸರ್ಕಾರ ಹೇಳಿಕೆ ಸಲ್ಲಿಸಿದೆ.

ವಾಷಿಂಗ್ಟನ್‌ :  ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯರು ಸೇರಿದಂತೆ ವಿದೇಶೀಯರಿಗೆ ನೀಡಿದ್ದ ಎಚ್‌1ಬಿ ವೀಸಾ ಪ್ರಮಾಣ ಕಡಿತಗೊಳಿಸುವ ವಿವಾದದ ನಂತರ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಮತ್ತೊಂದು ವಿವಾದ ಸೃಷ್ಟಿಸಿದೆ. 

ದೇಶದಲ್ಲಿ ಕಾರ್ಯನಿರ್ವಹಿಸುವ ಎಚ್‌1ಬಿ ವೀಸಾದಾರರ ಸಂಗಾತಿಗಳಿಗೆ ಹಾಗೂ 21 ವರ್ಷ ಮೇಲ್ಪಟ್ಟಮಕ್ಕಳಿಗೆ ನೀಡಲಾಗುವ ಎಚ್‌4 ‘ನೌಕರಿ ವೀಸಾ’ವನ್ನು ರದ್ದುಗೊಳಿಸುವುದಾಗಿ ಇಲ್ಲಿನ ಫೆಡರಲ್‌ ನ್ಯಾಯಾಲಯಕ್ಕೆ ಟ್ರಂಪ್‌ ಸರ್ಕಾರ ಹೇಳಿಕೆ ಸಲ್ಲಿಸಿದೆ.

ಎಚ್‌4 ವೀಸಾ ಅಡಿ ಸುಮಾರು 1.25 ಲಕ್ಷ ಸಂಗಾತಿಗಳು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ಸುಮಾರು 1 ಲಕ್ಷ ಜನರು ಭಾರತೀಯರೇ ಆಗಿದ್ದಾರೆ. ಟ್ರಂಪ್‌ ಸರ್ಕಾರವು ‘ಎಚ್‌4 ವೀಸಾ ನೀತಿಯನ್ನು ರದ್ದು ಮಾಡುವ ಪ್ರಕ್ರಿಯೆಯು ಭರದಿಂದ ಸಾಗಿದೆ.

ಹೊಸ ನಿಯಮವನ್ನು ಇನ್ನು 3 ತಿಂಗಳಲ್ಲಿ ಸಲ್ಲಿಸಲಾಗುತ್ತದೆ’ ಎಂದು ಕೊಲಂಬಿಯಾದ ಫೆಡರಲ್‌ ನ್ಯಾಯಾಲಯಕ್ಕೆ ತಿಳಿಸಿದೆ. ಹೀಗಾಗಿ ತಮ್ಮ ಹೊಟ್ಟೆಹೊರೆದುಕೊಳ್ಳಲು ಸಂಗಾತಿಯ ಜತೆಗೆ ನೌಕರಿ ಮಾಡುತ್ತಿದ್ದ ಭಾರತೀಯರಿಗೆ ಭಾರಿ ನಡುಕ ಆರಂಭವಾಗಿದೆ.