ನಿಬ್ಬೆರೆಗಾದ ವಿಶ್ವ ರಾಜಕೀಯ ಭೂಪಟ| ವಿಶ್ವ ರಾಜಕೀಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿ| ಉ.ಕೊರಿಯಾಗೆ ಕಾಲಿಟ್ಟ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್| ಉ.ಕೊರಿಯಾಗೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಹೆಗ್ಗಳಿಕೆ| ಉ.ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಊನ್ ಜೊತೆ ಮಾತುಕತೆ| ಉಭಯ ನಾಯಕರಿಗೆ ದ.ಕೊರಿಯಾ ಅಧ್ಯಕ್ಷ ಮೂನ್ ಜಿ ಇನ್ ಸಾಥ್|  

ಪಮ್ಮಂಜೋಮ್(ಜೂ.30): ವಿಶ್ವ ರಾಜಕೀಯ ಇತಿಹಾಸದಲ್ಲಿ ಇದು ನಿಜಕ್ಕೂ ಸುವರ್ಣಾಕ್ಷರಗಳಿಂದ ಬರದಿಡಬೇಕಾದ ಘಟನೆ. ಇತಿಹಾಸದುದ್ದಕ್ಕೂ ಪರಸ್ಪರ ಕತ್ತಿ ಮಸಿಯುತ್ತಲೇ ಬಂದಿರುವ ಅಮೆರಿಕ-ಉ.ಕೊರಿಯಾ ಪಾಲಿಗಂತೂ ಇದು ಸತ್ಯ.

Scroll to load tweet…

ಹೌದು, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಉ.ಕೊರಿಯಾಗೆ ಭೇಟಿ ನೀಡಿದ್ದಾರೆ. ಈ ಮೂಲಕ ಸಾಂಪ್ರದಾಯಿಕ ಕಮ್ಯುನಿಸ್ಟ್ ರಾಷ್ಟ್ರವಾಧ ಉ.ಕೊರಿಯಾ ನೆಲಕ್ಕೆ ಕಾಲಿಟ್ಟ ಮೊದಲ ಅಮೆರಿಕ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಿದ್ದಾರೆ.

ಉ.ಕೊರಿಯಾಗೆ ಭೇಟಿ ಕೊಟ್ಟ ಡೋನಾಲ್ಡ್ ಟ್ರಂಪ್, ಅಲ್ಲಿನ ಅಧ್ಯಕ್ಷ ಕಿಮ್ ಜಾಂಗ್ ಊನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Scroll to load tweet…

1950-53ರ ಕೊರಿಯನ್ ಯುದ್ಧದಲ್ಲಿ ತಮ್ಮ ಪರಸ್ಪರ ಹೋರಾಡಿದ ಸ್ಥಳವನ್ನು ಗುರುತಿಸುವ ರೇಖೆಯ ಮೇಲೆ ನಿಂತು ಪರಸ್ಪರ ನಾಯಕರು ಭೇಟಿಯಾಗಿ ಇತಿಹಾಸ ಸೃಷ್ಟಿಸಿದರು. 

Scroll to load tweet…

ನಂತರ ಸಿಯೋಲ್ ಗಡಿ ಬಳಿ ತೆರಳಿದ ಇಬ್ಬರೂ ನಾಯಕರು, ಅಲ್ಲಿ ದ. ಕೊರಿಯಾ ಅಧ್ಯಕ್ಷ ಮೂನ್-ಜಿ-ಇನ್ ಭೇಟಿ ಮಾಡಿದ್ದು ವಿಶೇಷವಾಗಿತ್ತು.