ಹ್ಯಾಕರ್’ಗಳು ಸಾಮಾನ್ಯ ಫೋನ್’ಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯಿರುವುದರಿಂದ ಯುಎಸ್ ಸೀಕ್ರೆಟ್ ಸರ್ವಿಸ್ ಮಾನ್ಯಮಾಡಿರುವ ಅತಿ ಸುರಕ್ಷಿತ ಫೋನ್’ಗಳನ್ನು ಅಮೆರಿಕಾ ಅಧ್ಯಕ್ಷರು ಬಳಸುತ್ತಾರೆ.
ವಾಷಿಂಗ್ಟನ್ (ಜ.21): ನಿನ್ನೆಯಷ್ಟೇ ಅಮೆರಿಕಾದ 45ನೇ ಅಧ್ಯಕ್ರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ತಾವು ಬಳಸುತ್ತಿದ್ದ ಅಂಡ್ರಾಯಿಡ್ ಫೋನ್ ಹಾಗೂ ನಂಬರನ್ನು ಬದಲಾಯಿಸಿದ್ದಾರೆ.
ಅಮೆರಿಕಾ ಅಧ್ಯಕ್ಷರಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಫೋನ್’ನ್ನು ಬಳಸಲಾರಂಭಿಸಿದ್ದಾರೆ. ಜತೆಗೆ ಅವರ ಮೊಬೈಲ್ ನಂ. ಕೂಡಾ ಬದಲಾಗಿದ್ದು, ಕೆಲವೇ ಕೆಲವು ವ್ಯಕ್ತಿಗಳು ಅದನ್ನು ಹೊಂದಿದ್ದಾರೆ ಎನ್ನಲಾಗಿದೆ.
ಹ್ಯಾಕರ್’ಗಳು ಸಾಮಾನ್ಯ ಫೋನ್’ಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯಿರುವುದರಿಂದ ಯುಎಸ್ ಸೀಕ್ರೆಟ್ ಸರ್ವಿಸ್ ಮಾನ್ಯಮಾಡಿರುವ ಅತಿ ಸುರಕ್ಷಿತ ಫೋನ್’ಗಳನ್ನು ಅಮೆರಿಕಾ ಅಧ್ಯಕ್ಷರು ಬಳಸುತ್ತಾರೆ.
ಬರಾಕ್ ಒಬಾಮಾ ತನ್ನ ಜತೆ ಮೊಬೈಲ್ ಕೊಂಡೊಯ್ಯುವ ಪ್ರಥಮ ಅಧ್ಯಕ್ರಾಗಿದ್ದರು. ಟ್ರಂಪ್ ಕೂಡಾ ಅದೇ ಸಂಪ್ರಾದಯವನ್ನು ಪಾಲಿಸಲಿದ್ದಾರೆ ಎಂದು ವರದಿಯಾಗಿದೆ.