ಸಾಕಷ್ಟು ಬಿಗಿ ಭದ್ರತೆ ಹೊಂದಿರುವ ಐತಿಹಾಸಿಕ ತಾಜ್ ಮಹಲ್ ಸಮೀಪ ಅಮೆರಿಕಾದ ಡ್ರೋನ್’ವೊಂದರ ಹಾರಾಟ ಕಂಡು ಬಂದಿದ್ದು ಪೋಲಿಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಆಗ್ರಾ (ನ.12): ಸಾಕಷ್ಟು ಬಿಗಿ ಭದ್ರತೆ ಹೊಂದಿರುವ ಐತಿಹಾಸಿಕ ತಾಜ್ ಮಹಲ್ ಸಮೀಪ ಅಮೆರಿಕಾದ ಡ್ರೋನ್’ವೊಂದರ ಹಾರಾಟ ಕಂಡು ಬಂದಿದ್ದು ಪೋಲಿಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಮಧ್ಯಾಹ್ಯ 2 ಗಂಟೆ ಸುಮಾರಿಗೆ ಬಿಳಿ ಬಣ್ಣದ ಚಿಕ್ಕ ಡ್ರೋನ್ ತಾಜ್ ಮಹಲ್ ಸಮೀಪ ಎರಡು ಬಾರಿ ಹಾರಾಡಿರುವುದು ಕಂಡು ಬಂದಿದೆ. ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಮೀಪದಲ್ಲಿಯೇ ಇದ್ದ ಹೋಟೆಲ್ ನಲ್ಲಿ ಡ್ರೋನ್ ಹಾರಾಟಕ್ಕೆ ತಯಾರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಾಜ್ ಮಹಲ್ ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
