ಗೂಢಚಾರಿಕೆ ಆರೋಪ : ಅಮೆರಿಕ ಸೇರಿ 14 ರಾಷ್ಟ್ರಗಳಿಂದ ರಷ್ಯಾ ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟನೆ

First Published 26, Mar 2018, 10:12 PM IST
US expels 60 Russian diplomats closes Seattle consulate
Highlights

ಬ್ರಿಟನ್ ಪ್ರಧಾನಿ ಥೆರೇಸಾ ಮೇ ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ಮಾತನಾಡಿದ ಬಳಿಕ ಯುರೋಪಿಯನ್ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ

ಅಮೆರಿಕ ಸೇರಿದಂತೆ 14 ಯುರೋಪ್ ರಾಷ್ಟ್ರಗಳಿಂದ 60 ರಷ್ಯಾ ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟನೆ ಮಾಡಲಾಗಿದೆ. ಬ್ರಿಟನ್ ನಲ್ಲಿ ರಷ್ಯಾದ ಮಾಜಿ ಗೂಢಚಾರಿಗೆ ವಿಷ ಪ್ರಾಶನ ಮಾಡಿಸಿರುವ ಪ್ರಕರಣದಲ್ಲಿ ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳು ಕಠಿಣ ಕ್ರಮ ಕೈಗೊಂಡಿದ್ದು ಅಮೆರಿಕ ಜೊತೆಗೆ 14 ಯುರೋಪಿಯನ್ ರಾಷ್ಟ್ರಗಳು ರಷ್ಯಾ ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಚಾಟನೆ ಮಾಡಿವೆ. ಬ್ರಿಟನ್ ಪ್ರಧಾನಿ ಥೆರೇಸಾ ಮೇ ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ಮಾತನಾಡಿದ ಬಳಿಕ ಯುರೋಪಿಯನ್ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ. 

ಅಮೆರಿಕ ಒಂದರಲ್ಲೇ ಸುಮಾರು 60 ರಷ್ಯಾದ ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಛಾಟನೆ ಮಾಡಲಾಗಿದ್ದು, ರಾಜತಾಂತ್ರಿಕ ಸೋಗಿನಲ್ಲಿ ಎಲ್ಲರೂ ರಷ್ಯಾ ಪರವಾಗಿ ಗೂಢಚಾರಿಕೆ ಮಾಡುತ್ತಿದ್ದರು, ಈ ಹಿನ್ನೆಲೆಯಲ್ಲಿ ರಷ್ಯಾಗೆ ಕಠಿಣ ಸಂದೇಶ ರವಾನೆ ಮಾಡಲು ಈ ಕ್ರಮ ಕೈಗೊಂಡಿರುವುದಾಗಿ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಉಚ್ಚಾಟಿತ ರಾಯಭಾರಿ ಅಧಿಕಾರಿಗಳಿಗೆ ಅಮೆರಿಕದಿಂದ ತೆರಳಲು 7 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಟ್ರಂಪ್ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

loader