ಟ್ರಂಪ್ ಅಧಿಕಾರದ ಬಳಿಕವೂ ವರ್ಮಾರನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದು ಟ್ರಂಪ್ ಅಧಿಕಾರ ಹಸ್ತಾಂತರ ತಂಡ ಹೇಳಿದೆ.
ಅಮೆರಿಕದ ಅಧ್ಯಕ್ಷ ಒಬಾಮರ ಆಡಳಿತಾವಯಲ್ಲಿ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನೇಮಕವಾಗಿದ್ದ ರಿಚರ್ಡ್ ರಾಹುಲ್ ವರ್ಮಾ ಜ.20ರೊಳಗೆ ತಮ್ಮ ಸ್ಥಾನ ತೊರೆಯಲಿದ್ದಾರೆ. ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕಾರ ಸ್ವೀಕಾರ ಮಾಡುವ ಮುನ್ನ ಭಾರತ-ಅಮೆರಿಕ ಸಂಬಂಧ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಚರ್ಡ್ ವರ್ಮಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ಟ್ರಂಪ್ ಅಧಿಕಾರದ ಬಳಿಕವೂ ವರ್ಮಾರನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದು ಟ್ರಂಪ್ ಅಧಿಕಾರ ಹಸ್ತಾಂತರ ತಂಡ ಹೇಳಿದೆ. ಆದರೆ, ವರ್ಮಾ ಅವರ ಮಕ್ಕಳ ಶಾಲಾ ಅವಧಿ ಪೂರ್ಣವಾಗುವವರೆಗೂ ಅಮೆರಿಕದಲ್ಲಿಯೇ ಖಾಸಗಿ ವ್ಯಕ್ತಿಯಾಗಿ ಉಳಿಯುವ ಸಾಧ್ಯತೆಯಿದೆ.
