Asianet Suvarna News Asianet Suvarna News

ಹಿಜ್ಬುಲ್ ಮುಜಾಹಿದ್ದೀನ್ ಜಾಗತಿಕ ಉಗ್ರ ಸಂಘಟನೆ : ಅಮೆರಿಕಾ

ಇತ್ತೀಚಿನ ಕೆಲವು ತಿಂಗಳುಗಳಿಂದ ಹಿಜ್ಬುಲ್ ಸಂಘಟನೆ ಕಾಶ್ಮೀರದಲ್ಲಿ ಸರಣಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿರುವ ಹಿನ್ನಲೆಯಲ್ಲಿ ಅಮೆರಿಕಾವು ಉಗ್ರ ಪಟ್ಟಿಗೆ ಸೇರಿಸಿದೆ. ಅಲ್ಲದೆ ಈ ಸಂಘಟನೆಯೊಂದಿಗೆ ಯಾವುದೇ ಕಾರಣಕ್ಕೂ ಯಾವ ರೀತಿಯ ಒಪ್ಪಂದಗಳನ್ನು ಮಾಡದಂತೆ ಅಮೆರಿಕಾದ ನಾಗರಿಕರಿಗೆ ತಿಳಿಸಲಾಗಿದೆ' ಎಂದು ಸರ್ಕಾರಿ ಪ್ರಕಟಣೆಯಲ್ಲಿ ಆದೇಶ ಹೊರಡಿಸಲಾಗಿದೆ.

US designates Hizbul Mujahideen as a foreign terrorist group

ವಾಷಿಂಗ್ಟನ್(ಆ.16): ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್'ಅನ್ನು ಅಮೆರಿಕಾ ಸರ್ಕಾರ ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸಿದೆ. ಅಲ್ಲದೆ ಕಳೆದ 2 ತಿಂಗಳ ಹಿಂದೆ ಈ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್'ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು.

ಇತ್ತೀಚಿನ ಕೆಲವು ತಿಂಗಳುಗಳಿಂದ ಹಿಜ್ಬುಲ್ ಸಂಘಟನೆ ಕಾಶ್ಮೀರದಲ್ಲಿ ಸರಣಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿರುವ ಹಿನ್ನಲೆಯಲ್ಲಿ ಅಮೆರಿಕಾವು ಉಗ್ರ ಪಟ್ಟಿಗೆ ಸೇರಿಸಿದೆ. ಅಲ್ಲದೆ ಈ ಸಂಘಟನೆಯೊಂದಿಗೆ ಯಾವುದೇ ಕಾರಣಕ್ಕೂ ಯಾವ ರೀತಿಯ ಒಪ್ಪಂದಗಳನ್ನು ಅಮೆರಿಕಾದ ನಾಗರಿಕರು ಕೈಗೊಳ್ಳಬಾರದು ಎಂದು ಸರ್ಕಾರಿ ಪ್ರಕಟಣೆಯಲ್ಲಿ ಆದೇಶ ಹೊರಡಿಸಲಾಗಿದೆ.

ಈ ಆದೇಶದ ಹೊರತಾಗಿ, ಅಮೆರಿಕಾ ವ್ಯಾಪ್ತಿ'ಗೆ ಒಳಪಡುವ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಎಲ್ಲಾ ಆಸ್ತಿ ಮತ್ತು ನಿರ್ಬಂಧಿಸಲಾಗಿದೆ.  .ಕಳೆದ ಜುಲೈ'ನಲ್ಲಿ ಇದೇ ಸಂಘಟನೆಯ ಉಗ್ರ ಬುರ್ಹನ್ ವಾನಿ'ಯನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು. ಪಾಕ್'ನ ಸೇನಾ ಮುಖ್ಯಸ್ಥ ಜ. ಖಮರ್ ಜಾವೇದ್ ಬಾಜ್ವಾ ಹಾಗೂ ನಿರ್ಗಮಿತ ಪ್ರಧಾನಿ ನವಾಜ್ ಷರೀಫ್ ಈತನನ್ನು ಹೊಗಳಿದ್ದರು.

1989ರಲ್ಲಿ ಈ ಸಂಘಟನೆ ಕಾಶ್ಮೀರದಲ್ಲಿ ದಾಳಿ ನಡೆಸುವ ಮೂಲಕ ಗುರುತಿಸಿಕೊಂಡು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ಕಡೆ ದಾಳಿಗಳನ್ನು ನಡೆಸಿ ನೂರಾರು ನಾಗರಿಕರ ಸಾವಿಗೆ ಕಾರಣವಾಗಿದೆ.

Follow Us:
Download App:
  • android
  • ios