ಲೂಸಿಯಾನಾದ ಚುನಾಯಿತ ಜನಪ್ರತಿನಿಧಿ ರಿಪಬ್ಲಿಕನ್ ಪಕ್ಷದ ಸ್ಟೀವ್ ಸ್ಕಾಲೈಸ್ ಸೇರಿದಂತೆ ಸುಮಾರು 25 ಜನರು ಬೇಸ್'ಬಾಲ್ ಆಟದ ಅಭ್ಯಾಸದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಜನಪ್ರತಿನಿಧಿಗಳ ನಡುವೆ ಪ್ರತೀ ವರ್ಷ ಬೇಸ್'ಬಾಲ್ ಆಟದ ಸ್ಪರ್ಧೆ ನಡೆಯುತ್ತದೆ. ಅದಕ್ಕೆ ತಯಾರಿಯಾಗಿ ಆಟದ ಮೈದಾನದಲ್ಲಿ ಅಭ್ಯಾಸ ನಡೆಯುತ್ತಿತ್ತೆನ್ನಲಾಗಿದೆ.

ವಾಷಿಂಗ್ಟನ್(ಜೂನ್ 14): ಅಮೆರಿಕದ ಜನಪ್ರತಿನಿಧಿಗಳು ಬೇಸ್'ಬಾಲ್ ಆಟದ ಅಭ್ಯಾಸದಲ್ಲಿ ತೊಡಗಿದ್ದಾಗ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ದಾಳಿಯಲ್ಲಿ ರಿಪಬ್ಲಿಕನ್ ಪಕ್ಷದ ಸಂಸದ ಸ್ಟೀವ್ ಸ್ಕಾಲೈಸ್ ಸೇರಿದಂತೆ ಹಲವು ಜನರು ಗಾಯಗೊಂಡಿದ್ದಾರೆ. ಅಪರಿಚಿತ ದುಷ್ಕರ್ಮಿಯು 50 ಸುತ್ತು ಗುಂಡು ಹಾರಿಸಿ ಹಲವರನ್ನು ಗಾಯಗೊಳಿಸಿದ ಎಂದು ವರದಿಗಳು ಹೇಳುತ್ತಿವೆ. ಪೊಲೀಸರು ಆ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆತ ಯಾಕೆ ಆ ಕೃತ್ಯ ಎಸಗಿದ ಎಂಬುದು ತಿಳಿಯಬೇಕಿದೆ.

ಲೂಸಿಯಾನಾದ ಚುನಾಯಿತ ಜನಪ್ರತಿನಿಧಿ ರಿಪಬ್ಲಿಕನ್ ಪಕ್ಷದ ಸ್ಟೀವ್ ಸ್ಕಾಲೈಸ್ ಸೇರಿದಂತೆ ಸುಮಾರು 25 ಜನರು ಬೇಸ್'ಬಾಲ್ ಆಟದ ಅಭ್ಯಾಸದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಜನಪ್ರತಿನಿಧಿಗಳ ನಡುವೆ ಪ್ರತೀ ವರ್ಷ ಬೇಸ್'ಬಾಲ್ ಆಟದ ಸ್ಪರ್ಧೆ ನಡೆಯುತ್ತದೆ. ಅದಕ್ಕೆ ತಯಾರಿಯಾಗಿ ಆಟದ ಮೈದಾನದಲ್ಲಿ ಅಭ್ಯಾಸ ನಡೆಯುತ್ತಿತ್ತೆನ್ನಲಾಗಿದೆ. ಗಾಯಗೊಂಡವರಲ್ಲಿ ಅಮೆರಿಕದ ಸಂಸತ್ ಭವನದ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಒಳಗೊಂಡಿದ್ದಾರೆ.