ಕಾರವಾರ[ಜೂ. 19]  ಅಮೆರಿಕ ಮೂಲದ ಮಹಿಳೆಯೊಬ್ಬರು ಬೌದ್ಧ ಸಂನ್ಯಾಸಿಗೆ ಕೋಟಿ ಕೋಟಿ ರೂ.ಪಂಗನಾಮ ಹಾಕಿದ್ದಾರೆ.  ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡ ಅಮೆರಿಕ ಮಹಿಳೆ ಹಣ ಲಪಟಾಯಿಸಿದ್ದಾಳೆ.

ವಂಚನೆ ಪ್ರಕರಣವನ್ನು  ಸೈಬರ್ ಕ್ರೈಂ ಪೊಲೀಸರಿಂದ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಬೌದ್ದ ಸನ್ಯಾಸಿ ಪ್ರಕರಣ ಸಿಐಡಿ ಅಂಗಳಕ್ಕೆ ಬಂದಿದೆ.

ಲಾಮಾ ಕ್ಯಾಂಪ ಎರಡರ ಬೌದ್ಧ ಮಂದಿರದ ಸನ್ಯಾನಿಗೆ  ಕರ್ಮಾ ಕೆಡುಪ್ ಎಂಬುವರಿಗೆ 1. 96 ಕೋಟಿ ವಂಚನೆ‌ ಮಾಡಲಾಗಿತ್ತು. ರೊನಾಲ್ಡ್ ಮೈಕಲ್ ಎಂಬ ಮಹಿಳೆಯಿಂದ ಮೋಸ‌ ಮಾಡಿದ್ದ ಸಂಬಂಧ ದೂಎಉ ದಾಖಲಾಗಿತ್ತು.