ಕಳೆದ ಬುಧವಾರ ರಾತ್ರಿ 51 ವರ್ಷದ ಆ್ಯಡಂ ಪುರಿನ್'ಟನ್ ಎಂಬ  ಅಮೆರಿಕಾದ ಮಾಜಿ ನೌಕಾಧಿಕಾರಿ ಕ್ಷುಲ್ಲಕ ವಿಚಾರದಲ್ಲಿ ಶ್ರೀನಿವಾಸ ಹಾಗೂ ಆತನ ಗೆಳೆಯ ಅಲೋಕ್ ಮಡಾಸನಿ ಅವರನ್ನು ನಿಂದಿಸಿ ಜಗಳಕ್ಕಿಳಿದಿದ್ದಾನೆ. ಬಳಿಕ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ ಶ್ರಿನಿವಾಸ ಮೃತಪಟ್ಟರೆ ಅಲೋಕ್’’ಗೆ ಗಂಭೀರವಾಗಿ ಗಾಯಗಳಾಗಿವೆ.

ವಾಷಿಂಗ್ಟನ್ (ಫೆ.25): ಕಳೆದ ಬುಧವಾರ ಕನ್ಸಾಸ್'ನ ನೈಟ್ ಕ್ಲಬ್ ಒಂದರಲ್ಲಿ ನಡೆದ ಭಾರತೀಯ ಪ್ರಜೆಯ ಹತ್ಯೆಯನ್ನು ಖಂಡಿಸಿರುವ ಅಮೆರಿಕಾ, ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸುವುದಾಗಿ ಹೇಳಿದೆ.

Add Asianetnews Kannada as a Preferred SourcegooglePreferred

ಭಾರತೀಯ ದೂತವಾಸ ಅಧಿಕಾರಿಗಳು ಈ ವಿಷಯನ್ನು ಅಮೆರಿಕನ್ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದ್ದಾರೆ. ಈ ಪ್ರಕರಣವನ್ನು ಖಂಡಿಸಿರುವ ಅಮೆರಿಕನ್ ಸರ್ಕಾರವು, ಈ ಕುರಿತು ತನಿಖೆ ನಡೆಸುವುದಾಗಿ ಆಶ್ವಾಸನೆ ನೀಡಿದೆ ಎನ್ನಲಾಗಿದೆ.

ಭಾರತೀಯ ಅಧಿಕಾರಿಗಳು ಹತ್ಯೆಯಾದ ಸಾಫ್ಟವೇರ್ ಇಂಜಿನಿಯರ್ ಶ್ರೀನಿವಾಸ್ ಕುಚಿಬೋತ್ಲಾ(32) ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ, ಹಾಗೂ ಮೃತದೇಹವನ್ನು ಆದಷ್ಟು ಬೇಗ ತವರಿಗೆ ಕಳುಹಿಸುವುದಾಗಿ ಹೇಳಿದ್ದಾರೆ.

ಕಳೆದ ಬುಧವಾರ ರಾತ್ರಿ 51 ವರ್ಷದ ಆ್ಯಡಂ ಪುರಿನ್'ಟನ್ ಎಂಬ ಅಮೆರಿಕಾದ ಮಾಜಿ ನೌಕಾಧಿಕಾರಿ ಕ್ಷುಲ್ಲಕ ವಿಚಾರದಲ್ಲಿ ಶ್ರೀನಿವಾಸ ಹಾಗೂ ಆತನ ಗೆಳೆಯ ಅಲೋಕ್ ಮಡಾಸನಿ ಅವರನ್ನು ನಿಂದಿಸಿ ಜಗಳಕ್ಕಿಳಿದಿದ್ದಾನೆ. ಬಳಿಕ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ ಶ್ರಿನಿವಾಸ ಮೃತಪಟ್ಟರೆ ಅಲೋಕ್’’ಗೆ ಗಂಭೀರವಾಗಿ ಗಾಯಗಳಾಗಿವೆ.

ಆ್ಯಡಂ ಪುರಿನ್'ಟನ್ ಗುಂಡಿಟ್ಟು ಕೊಲ್ಲುವ ಮುನ್ನ 'ನಮ್ಮ ದೇಶ ಬಿಟ್ಟು ತೊಲಗಿ' ಎಂದು ಅಬ್ಬರಿಸಿದ್ದಾನೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ಜನಾಂಗೀಯ ದ್ವೇಷಕ್ಕೆ ಭಾರತೀಯನೊಬ್ಬ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ.

ಹೈದರಾಬಾದ್ನ ಜವಹರ್ ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪಡೆದಿರುವ ಶ್ರೀನಿವಾಸ್ ಕುಚಿಬೋತ್ಲಾ ನಂತರ ಅಮೆರಿಕಾದ ಟಾಕ್ಸಸ್ ವಿವಿಯಿಂದ ಸ್ವಾತಕೋತ್ತರ ಪದವಿ ಪಡೆದಿದ್ದರು. ನಂತರ ಯುಎಸ್'ನ ಒಲ್ತೆ'ದ ಪಟ್ಟಣದಲ್ಲಿನ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಬುಧವಾರ ಸ್ನೇಹಿತರೊಂದಿಗೆ ಕ್ಯಾನ್ವಾಸ್ ಬಾರ್'ನ ನೈಟ್ ಕ್ಲಬ್'ಗೆ ಹೋಗಿದ್ದಾಗ ಹತ್ಯೆ ಸಂಭವಿಸಿದೆ.