ವಾಯುನೆಲೆ ಮೆಲೆ ಬಿದ್ದ ಉಲ್ಕೆ: ತುಟಿ ಬಿಚ್ಚದ ವಾಯುಸೇನೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 6:25 PM IST
US Air Force Silent On Reports Of Meteor Crash Near Base
Highlights

ಯುಎಸ್ ವಾಯುನೆಲೆ ಮೇಲೆ ಬಿದ್ದ ಉಲ್ಕೆ! ಮಾಹಿತಿ ನೀಡದ ಅಮೆರಿಕ ವಾಯುಸೇನೆ! ಗ್ರೀನ್ ಲ್ಯಾಂಡ್ ನ ಠ್ಹುಲೆ ವಾಯುನೆಲೆ!  2.1 ಟನ್ ತೂಕದ ಭಾರೀ ಗಾತ್ರದ ಉಲ್ಕೆ 

ಮೆಲ್ಬೋರ್ನ್(ಆ.4): ಇತ್ತಿಚೀಗೆ ಅಮೆರಿಕದ ಗ್ರೀನ್‌ಲ್ಯಾಂಡ್‌ನಲ್ಲಿರುವ ವಾಯುನೆಲೆ ಬಳಿ ಭಾರೀ ಗಾತ್ರದ ಉಲ್ಕೆಯೊಂದು ಬಿದ್ದ ಅನುಮಾನವಿದ್ದು, ಈ ಕುರಿತು ಅಮೆರಿಕ ವಾಯುಸೇನೆ ಚಕಾರ ಎತ್ತುತ್ತಿಲ್ಲ.

2.1 ಟನ್ ತೂಕದ ಭಾರೀ ಗಾತ್ರದ ಉಲ್ಕೆ ಠ್ಹುಲೆ ವಾಯುನೆಲೆ ಸಮೀಪ ಸ್ಫೋಟವಾಗಿದ್ದು, ಈ ಉಲ್ಕೆ ಸೆಕೆಂಡಿಗೆ 24.4 ಕಿ.ಮೀ. ವೇಗದಲ್ಲಿ ಬಂದು ಭೂಮಿಗೆ ಅಪ್ಪಳಿಸಿದೆ ಎನ್ನಲಾಗಿದೆ.

ಆದರೆ ಈ ಕುರಿತು ಅಮೆರಿಕ ವಾಯುಪಡೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದು, ವಾಯುನೆಲೆ ಸಮೀಪ ಉಲ್ಕೆ ಸ್ಫೋಟಿಸುತ್ತಿರುವ ದೃಶ್ಯ ನಾಸಾ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

ಈ ಕುರಿತು ಅಮೆರಿಕನ್ ವಿಜ್ಞಾನಿಗಳ ಒಕ್ಕೂಟದ ಪರಮಾಣು ಮಾಹಿತಿ ಯೋಜನೆ ನಿರ್ದೇಶಕ ಹನ್ಸ್ ಕ್ರಿಸ್ಟೆನ್ಸನ್ ಟ್ವೀಟ್ ಮಾಡಿದ್ದು, ಠ್ಹುಲೆ ವಾಯುನೆಲೆ ಸಮೀಪ ಉಲ್ಕೆ ಸ್ಫೋಟವಾಗಿರುವುದನ್ನು ಖಚಿತಪಡಿಸಿದ್ದಾರೆ.

loader