ಉತ್ತರ ಕೊರಿಯಾ ಜೊತೆಗಿನ ಬಿಕ್ಕಟ್ಟು ಇತ್ಯರ್ಥವಾಗುವ ಯಾವುದೇ ಲಕ್ಷಣ ಕಾಣಿಸದಿರುವ ನಡುವೆಯೇ, ಅಮೆರಿಕ ವಾಯುಪಡೆ ತನ್ನ ಅಣ್ವಸ್ತ್ರ ಸಜ್ಜಿತ ಬಾಂಬರ್'ಗಳನ್ನು ದಿನದ 24 ತಾಸೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಮುಂದಾಗಿದೆ. 1991ಲ್ಲಿ ಶೀತಲ ಸಮರ ಅಂತ್ಯಗೊಂಡ ಬಳಿಕ ಇದೇ ಮೊದಲ ಬಾರಿ ಅಮೆರಿಕವು ತನ್ನ ಬಾಂಬರ್‌ಗಳನ್ನು ಸನ್ನದ್ಧ ಸ್ಥಿತಿ ಯಲ್ಲಿರಿಸಲು ಅದು ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರ ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ.
ವಾಷಿಂಗ್ಟನ್(ಅ.24): ಉತ್ತರ ಕೊರಿಯಾ ಜೊತೆಗಿನ ಬಿಕ್ಕಟ್ಟು ಇತ್ಯರ್ಥವಾಗುವ ಯಾವುದೇ ಲಕ್ಷಣ ಕಾಣಿಸದಿರುವ ನಡುವೆಯೇ, ಅಮೆರಿಕ ವಾಯುಪಡೆ ತನ್ನ ಅಣ್ವಸ್ತ್ರ ಸಜ್ಜಿತ ಬಾಂಬರ್'ಗಳನ್ನು ದಿನದ 24 ತಾಸೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಮುಂದಾಗಿದೆ. 1991ಲ್ಲಿ ಶೀತಲ ಸಮರ ಅಂತ್ಯಗೊಂಡ ಬಳಿಕ ಇದೇ ಮೊದಲ ಬಾರಿ ಅಮೆರಿಕವು ತನ್ನ ಬಾಂಬರ್ಗಳನ್ನು ಸನ್ನದ್ಧ ಸ್ಥಿತಿ ಯಲ್ಲಿರಿಸಲು ಅದು ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರ ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ.
ಈ ಬಾಂಬರ್ಗಳಿಗೆ ಅಣ್ವಸ್ತ್ರಗಳನ್ನು ಅಳವಡಿಸಲಾಗುತ್ತದೆ. ಒಮ್ಮೆ ಮೇಲಿನಿಂದ ಆದೇಶ ಬಂತು ಎಂದರೆ ಯಾವುದೇ ಕ್ಷಣದಲ್ಲಿ ಈ ಬಾಂಬರ್'ಗಳು ವೈರಿ ಪಡೆಗಳ ಮೇಲೆ ಮುಗಿಬೀಳುತ್ತವೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ‘ಬಿ-52 ಬಾಂಬರ್ ಅನ್ನು ಈ ಹಿಂದೆ 1991ರವರೆಗೆ ಶೀತಲ ಸಮರ ಏರ್ಪಟ್ಟ ವೇಳೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಈಗ ಈ ಕುರಿತ ಆದೇಶ ಶೀಘ್ರ ಹೊರಬೀಳುವ ನಿರೀಕ್ಷೆ ಇದೆ.
ಈ ಕುರಿತ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ‘ಡಿಫೈನ್ಸ್ ಒನ್’ ಎಂಬ ಮಾಧ್ಯಮ ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ವಾಯುಪಡೆ ಮುಖ್ಯಸ್ಥ ಡೇವಿಡ್ ಗೋಲ್ಡ್ ಫೂನ್, ‘ಯಾವುದೇ ನಿರ್ದಿಷ್ಟ ಯೋಜನೆ ಇಟ್ಟುಕೊಂಡು ನಾವು ಬಾಂಬರ್'ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುತ್ತಿಲ್ಲ. ಬದಲಾಗಿ ಜಾಗತಿಕ ಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಇಂಥ ಕ್ರಮಕ್ಕೆ ಮುಂದಾಗಿದ್ದೇವೆ. ನಾವು ಯಾವುದೇ ಸ್ಥಿತಿಗೆ ಸನ್ನದ್ಧರಾಗಿ ದ್ದೇವೆ ಎಂಬುದನ್ನು ಸಾಬೀತು ಮಾಡಲು ಈ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ ಎಂದು ಡಿಫೆನ್ಸ್ ಒನ್ ವರದಿ ಹೇಳಿದೆ. ಈ ಮೂಲಕ ಅಮೆರಿಕದ ಗುರಿಯು ಈಗ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕುತ್ತಿ ರುವ ಉತ್ತರ ಕೊರಿಯಾ ಎಂಬುದು ಸ್ಪಷ್ಟವಾಗಿದೆ
