ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಭದ್ರತಾ ಸಮ್ಮೇಳನದ ಸಂದರ್ಭದಲ್ಲಿ ಸಭಿಕರೊಬ್ಬರು, ಒಂದು ವೇಳೆ ಟ್ರಂಪ್ ಆದೇಶಿಸಿದರೆ ಮುಂದಿನ ವಾರ ಚೀನಾದ ಮೇಲೆ ಅಣ್ವಸ್ತ್ರ ದಾಳಿ ಮಾಡುತ್ತೀರಾ ಎಂದು ಊಹಾತ್ಮಕ ಪ್ರಶ್ನೆ ಕೇಳಿದರು.

ಕ್ಯಾನ್‌ಬೆರಾ(ಜು.28): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶಿಸಿದರೆ ಮುಂದಿನ ವಾರವೇ ಚೀನಾ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಪೆಸಿಫಿಕ್ ಸಾಗರದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಘೋಷಿಸಿದ್ದಾರೆ.

ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಭದ್ರತಾ ಸಮ್ಮೇಳನದ ಸಂದರ್ಭದಲ್ಲಿ ಸಭಿಕರೊಬ್ಬರು, ಒಂದು ವೇಳೆ ಟ್ರಂಪ್ ಆದೇಶಿಸಿದರೆ ಮುಂದಿನ ವಾರ ಚೀನಾದ ಮೇಲೆ ಅಣ್ವಸ್ತ್ರ ದಾಳಿ ಮಾಡುತ್ತೀರಾ ಎಂದು ಊಹಾತ್ಮಕ ಪ್ರಶ್ನೆ ಕೇಳಿದರು. ಅದಕ್ಕೆ ಹೌದು ಎಂದು ಸ್ವಿಫ್ಟ್ ಉತ್ತರ ನೀಡಿದರು. ಅಲ್ಲದೆ, ಮಿಲಿಟರಿ ಮೇಲೆ ನಾಗರಿಕ ಸರ್ಕಾರದ ನಿಯಂತ್ರಣಕ್ಕೆ ಬೆಂಬಲ ಸೂಚಿಸಿದರು.

ಆಸ್ಟ್ರೇಲಿಯಾ ಕರಾವಳಿಯಲ್ಲಿ ಅಮೆರಿಕ ಹಾಗೂ ಆಸ್ಟ್ರೇಲಿಯಾದ ನೌಕಾಪಡೆಗಳು ಸಮರಾಭ್ಯಾಸ ನಡೆಸುತ್ತಿವೆ. 36ಯುದ್ಧ ನೌಕೆಗಳು, 220 ವಿಮಾನಗಳು, 33 ಸಾವಿರ ಯೋಧರು ಭಾಗವಹಿಸಿದ್ದಾರೆ. ಈ ಕಾರ್ಯಾಚರಣೆ ಮೇಲೆ ನಿಗಾ ಇಡಲು ತನ್ನ ನೌಕೆಯೊಂದನ್ನು ಚೀನಾ ರವಾನಿಸಿದೆ. ಇಂತಹ ಸಂದರ್ಭದಲ್ಲೇ ಸ್ವಿಫ್ಟ್ ಅವರು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.