ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪ್ಪಣೆ ಕೊಟ್ಟರೆ ಚೀನಾ ವಿರುದ್ಧ ಅಣ್ವಸ್ತ್ರ ಪ್ರಯೋಗಿಸುವುದಾಗಿ ಅಮೆರಿಕಾ ಸೇನಾ ಕಮಾಂಡರ್ ಹೇಳಿದ್ದಾರೆ. ಆಸ್ಟ್ರೇಲಿಯಾದೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿದ ಬಳಿಕ ಸಭೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಪೆಸಿಫಿಕ್ ಕಮಾಂಡರ್ ಸ್ಕಾಟ್ ಸ್ವಿಫ್ಟ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ರೀತಿ ಹೇಳಿದ್ದಾರೆ.
ಕ್ಯಾನ್'ಬೆರ್ರಾ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪ್ಪಣೆ ಕೊಟ್ಟರೆ ಚೀನಾ ವಿರುದ್ಧ ಅಣ್ವಸ್ತ್ರ ಪ್ರಯೋಗಿಸುವುದಾಗಿ ಅಮೆರಿಕಾ ಸೇನಾ ಕಮಾಂಡರ್ ಹೇಳಿದ್ದಾರೆ.
ಆಸ್ಟ್ರೇಲಿಯಾದೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿದ ಬಳಿಕ ಸಭೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಪೆಸಿಫಿಕ್ ಕಮಾಂಡರ್ ಸ್ಕಾಟ್ ಸ್ವಿಫ್ಟ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ರೀತಿ ಹೇಳಿದ್ದಾರೆ.
ಮುಂದಿನ ವಾರ ಚೀನಾದ ಮೇಲೆ ಅಣ್ವಸ್ತ್ರ ಪ್ರಯೋಗಿಸುವಂತೆ ಟ್ರಂಪ್ ಆದೇಶಿಸಿದರೆ, ನೀವು ಅದನ್ನು ಮಾಡುತ್ತೀರಾ ಎಂದು ಸಭಿಕರಲ್ಲೊಬ್ಬರು ಕೇಳಿದಾಗ, ಹೌದು ಎಂದು ಅವರು ಉತ್ತರಿಸಿದ್ದಾರೆ.
