ರಂಜಾನ್‌ ತಿಂಗಳಲ್ಲಿ ಉರ್ದು ಶಾಲೆಗಳ ಬಹುತೇಕ ಮಕ್ಕಳು ಉಪವಾಸ ಮಾಡುವುದರಿಂದ ಮಧ್ಯಾಹ್ನದ ಬಿಸಿಯೂಟ ಉಳಿಯುತ್ತದೆ. ಸಂಪೂ ರ್ಣವಾಗಿ ಈ ಆಹಾರ ವ್ಯರ್ಥವಾಗಿ ಪೋಲಾಗುತ್ತದೆ. ಆದ್ದರಿಂದ ಪರ್ಯಾಯವಾಗಿ ಬಾಳೆಹಣ್ಣು, ಖರ್ಜೂರ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.
ರಂಜಾನ್ ತಿಂಗಳಲ್ಲಿ ಉರ್ದು ಶಾಲೆಗಳ ಬಹುತೇಕ ಮಕ್ಕಳು ಉಪವಾಸ ಮಾಡುವುದರಿಂದ ಮಧ್ಯಾಹ್ನದ ಬಿಸಿಯೂಟ ಉಳಿಯುತ್ತದೆ. ಸಂಪೂ ರ್ಣವಾಗಿ ಈ ಆಹಾರ ವ್ಯರ್ಥವಾಗಿ ಪೋಲಾಗುತ್ತದೆ. ಆದ್ದರಿಂದ ಪರ್ಯಾಯವಾಗಿ ಬಾಳೆಹಣ್ಣು, ಖರ್ಜೂರ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.
ಮಕ್ಕಳಿಗೆ ಮಧ್ಯಾಹ್ನವೇ ಬಾಳೆಹಣ್ಣು, ಖರ್ಜೂರ ವಿತರಿಸಲಾಗುತ್ತಿದ್ದು, ಮಕ್ಕಳು ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಸಂಜೆ ಉಪವಾಸ ಮುಗಿದ ಬಳಿಕ ಇಫ್ತಿಯಾರ್ನಲ್ಲಿ ಇದನ್ನು ಸೇವಿಸುವ ಮೂಲಕ ಉಪವಾಸವನ್ನು ಬಿಡುತ್ತಾರೆ.
(ಸಾಂದರ್ಭಿಕ ಚಿತ್ರ)
