ಉರ್ದು ನಾಮಫಲಕ ತೆರವು; ಕನ್ನಡ ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ

First Published 5, Mar 2018, 10:41 AM IST
Urdu Name plate Remove from Nagara Palika Office
Highlights

ಇಲ್ಲಿನ ಮಹಾನಗರ ಪಾಲಿಕೆ ನೂತನ ಕಛೇರಿ ಮೇಲೆ ಉರ್ದು ನಾಮಫಲಕ ಹಾಕಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ.  ಪಾಲಿಕೆ‌ ಕಛೇರಿ ಮೇಲಿನ ಉರ್ದು ನಾಮಫಲಕ ತೆರವು ವಿರೋಧಿಸಿ ಕಲಬುರಗಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. 

ಕಲಬುರಗಿ (ಮಾ.05):  ಇಲ್ಲಿನ ಮಹಾನಗರ ಪಾಲಿಕೆ ನೂತನ ಕಛೇರಿ ಮೇಲೆ ಉರ್ದು ನಾಮಫಲಕ ಹಾಕಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ.  ಪಾಲಿಕೆ‌ ಕಛೇರಿ ಮೇಲಿನ ಉರ್ದು ನಾಮಫಲಕ ತೆರವು ವಿರೋಧಿಸಿ ಕಲಬುರಗಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. 

ನಿನ್ನೆಯಷ್ಟೆ ಪಾಲಿಕೆಯ ಕೆಲ ಸದಸ್ಯರು ಕಟ್ಟಡದ ಮೇಲೆ ಅನಧಿಕೃತವಾಗಿ ಉರ್ದು ನಾಮಫಲಕ ಹಾಕಿಸಿದ್ದರು.  ವಿವಾದವಾಗುತ್ತೆ ಅಂತ ಅಧಿಕಾರಿಗಳು ಉರ್ದು ನಾಮಫಲಕವನ್ನ ನಿನ್ನೆ ಸಂಜೆ ತೆರವುಗೊಳಿಸಿದ್ದರು.  ಆದರೆ ನಾಮಫಲಕ ತೆರವುಗೊಳಿಸಿದ್ದಕ್ಕೆ ವಿವಿಧ ಮುಸ್ಲಿಂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.  ಉರ್ದು ನಾಮಫಲಕ ಬೇಡವೆಂದರೆ ಕನ್ನಡ ಇಂಗ್ಲಿಷ್ ನಾಮಫಲಕವೂ ಬೇಡ ಎಂದು  ಕನ್ನಡ ನಾಮಫಲಕಕ್ಕೆ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿದ್ದಾರೆ. 30 ಕ್ಕೂ ಅಧಿಕ ಪ್ರತಿಭಟನಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಪಾಲಿಕೆ ಬಳಿ ಜಿಲ್ಲಾ ಪೊಲೀಸ್ ಇಲಾಖೆ ಭದ್ರತೆ ಬಿಗಿಗೊಳಿಸಿದೆ. 

 

loader