ಆದರೆ ಕಳೆದ ಶುಕ್ರವಾರ ಆಕೆ ಏಕಾಏಕಿ  ಪ್ರತ್ಯಕ್ಷವಾಗಿದ್ದು ಕುಟುಂಬ ಹಾಗೂ ಗ್ರಾಮಸ್ಥರು ಹೈರಾಣಾಗಿದ್ದಾರೆ.

ಕಾನ್ಪುರ (ಡಿ.24): ಮೃತಪಟ್ಟ 40 ವರ್ಷದ ಬಳಿಕ ಮಹಿಳೆಯೊಬ್ಬಳು ಬದುಕಿ ಬಂದ ಘಟನೆ ನಡೆದಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ಬಿದ್ನೂ ಎಂಬ ಗ್ರಾಮದ 82 ವರ್ಷ ಪ್ರಾಯದ ವಿಲಾಸ ಎಂಬ ಮಹಿಳೆಯೊಬ್ಬಳು 1976ರಲ್ಲಿ ಹಾವು ಕಡಿತದಿಂದ ಸಾವನಪ್ಪಿದ್ದರು. ಕುಟುಂಬ ಮಂದಿ ಆಕೆಯ ಅಂತ್ಯಕ್ರಿಯೆಯನ್ನು ಕೂಡಾ ನಡೆಸಿದ್ದು, ಆಕೆಯ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಹರಿಯಬಿಟ್ಟಿದ್ದರು ಎನ್ನಲಾಗಿದೆ.

ಆದರೆ ಕಳೆದ ಶುಕ್ರವಾರ ಆಕೆ ಏಕಾಏಕಿ ಪ್ರತ್ಯಕ್ಷವಾಗಿದ್ದು ಕುಟುಂಬ ಹಾಗೂ ಗ್ರಾಮಸ್ಥರು ಹೈರಾಣಾಗಿದ್ದಾರೆ.

ಹಾವು ಕಡಿತದಿಂದ ತಾನು ಸಾವನ್ನಪ್ಪಿಲ್ಲವೆಂದು, ಕೇವಲ ಮೂರ್ಛೆಹೊಂದಿದದ್ದು, ದೋಣಿಯವರು ತನ್ನನ್ನು ರಕ್ಷಿಸಿರುವುದಾಗಿ,, ಪಕ್ಕದ ಗ್ರಾಮದ ದೇವಾಸ್ಥಾನದಲ್ಲಿ ಬಿಟ್ಟಿರುವುದಾಗಿಯೂ ಆಕೆಯು ಹೇಳಿಕೊಂಡಿದ್ದಾಳೆ.

ಆಕೆಯ ಇಬ್ಬರು ಪುತ್ರಿಯರು -ರಾಮ್ ಕುಮಾರಿ ಹಾಗೂ ಮುನ್ನಿ- ತಮ್ಮ ತಾಯಿಯನ್ನು ಆಖೆಯ ದೇಹದಲ್ಲಿದ್ದ ಗುರುತು-ಚಿಹ್ನೆಯಿಂದ ಗುರುತಿಸಿದ್ದಾರೆ.

ಚಿತ್ರಕೃಪೆ: ಟೈಮ್ಸ್ ಆಫ್ ಇಂಡಿಯಾ