ಸ್ವತಂತ್ರೋತ್ತರ ಭಾರತದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಇದೊಂದು ದೊಡ್ಡ ಜಯಭೇರಿಯಾಗಿದೆ. ಉತ್ತರ ಪ್ರದೇಶ ಜನತೆ ಐತಿಹಾಸಿಕ ಆದೇಶ ನೀಡಿದ್ದು ಪಕ್ಷದ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿ (ಮಾ.11): ಸ್ವತಂತ್ರೋತ್ತರ ಭಾರತದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಇದೊಂದು ದೊಡ್ಡ ಜಯಭೇರಿಯಾಗಿದೆ. ಉತ್ತರ ಪ್ರದೇಶ ಜನತೆ ಐತಿಹಾಸಿಕ ಆದೇಶ ನೀಡಿದ್ದು ಪಕ್ಷದ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಉತ್ತರ ಪ್ರದೇಶ ಹಾಗೂ ಉತ್ತರ ಖಂಡದಲ್ಲಿ ಬಿಜೆಪಿ ಗೆಲುವಿಗೆ ಪ್ರಿಕ್ರಿಯಿಸಿದ ಅಮಿತ್ ಶಾ ಜಾತಿ ಆಧಾರಿತ ರಾಜಕಾರಣವನ್ನು ಜನರು ನಿರಾಕರಿಸಿದ್ದಾರೆ. ಅಭಿವೃದ್ಧಿಗಾಗಿ ಮತ ನೀಡಿದ್ದಾರೆ. ಇದು ದೇಶವನ್ನು ಸರಿಯಾದ ದಿಶೆಯತ್ತ ತೆಗೆದುಕೊಂಡು ಹೋಗಲಿದೆ ಎಂದು ಹೇಳಿದ್ದಾರೆ.
ಮುಸ್ಲೀಂ ಪ್ರಾಬಲ್ಯವಿರುವ ಪ್ರದೇಶದಲ್ಲೂ ಸಹ ಬಿಜೆಪಿ ಗೆಲುವನ್ನು ಸಾಧಿಸಿದೆ. ಉತ್ತರ ಪ್ರದೇಶ ಜನತೆ ಹಿಂದೂ ಮುಸ್ಲೀಂ ಎನ್ನುವುದನ್ನೆಲ್ಲಾ ಮೀರಿ ನಿಂತಿದ್ದಾರೆ ಡೆಂದಿದ್ದಾರೆ.
ಇನ್ನು ಉತ್ತರ ಪ್ರದೇಶ ಹಾಗೂ ಉತ್ತರಖಂಡದಲ್ಲಿ ಸಿಎಂ ಅಭ್ಯರ್ಥಿ ಯಾರು ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಸಂಸದೀಯ ಮಂಡಳಿಯಲ್ಲಿ ನಿರ್ಧಾರವಾಗಲಿದೆ . ಅರ್ಹತೆ ಆಧಾರದ ಮೇಲೆ ಸಿಎಂ ಯಾರಾಗಬೇಕೆಂದು ನಿರ್ಧರಿಸಲಾಗುತ್ತದೆ ಎಂದಿದ್ದಾರೆ. ‘
ಮಾಯಾವತಿಯವರ ಆರೋಪದ ಬಗ್ಗೆ, ನನಗೆ ಅವರ ನೋವು ಅರ್ಥವಾಗುತ್ತದೆ. ಅವರಿಗೆ ಆರೋಪ ಮಾಡುವ ಅಧಿಕಾರವಿದೆ. ಆದರೆ ಅದು ಸತ್ಯವಲ್ಲ ಎಂದಿದ್ದಾರೆ.
