ಲಕ್ನೋ[ಅ.07]: ಶಿಕ್ಷಕರೆಂದರೆ ಮಕ್ಕಳಿಗೆ ಮಾದರಿಯಾಗಿರಬೇಕು. ಆದರೆ ಉತ್ತರ ಪ್ರದೇಶದ ಸೀತಾಪುರದ ಶಿಕ್ಷಕನೊಬ್ಬ ಕ್ಲಾಸಲ್ಲೇ ಕುಳಿತು ಬೀಡಿ ಸೇದಿ ಎಡವಟ್ಟು ಮಾಡಿಕೊಂಡಿದ್ದಾನೆ.

ಈತ ವಿದ್ಯಾರ್ಥಿಗಳ ಎದುರೇ ಕಡ್ಡಿ ಗೀರಿ ಬೀಡಿಗೆ ಬೆಂಕಿ ಹಚ್ಚಿ ಸೇದುವುದನ್ನು ಯಾರೋ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಅದು ವೈರಲ್‌ ಆಗಿದೆ.

ಈ ವಿಷಯ ರಾಜ್ಯ ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದ್ದು, ಕೂಡಲೇ ಇಲಾಖೆಯು ಶಿಕ್ಷಕನನ್ನು ಪತ್ತೆ ಹಚ್ಚಿ ಆತನಿಗೆ ಸಸ್ಪೆಂಡ್‌ ಶಿಕ್ಷೆ ವಿಧಿಸಿದೆ. ಶಿಕ್ಷಕರು ಧೂಮಪಾನ ಮಾಡಬಾರದು. ಅದೂ, ಮಕ್ಕಳ ಎದುರಲ್ಲಂತೂ ಮಾಡಲೇಬಾರದು’ ಎಂದಿದ್ದಾರೆ ಶಿಕ್ಷಣಾಧಿಕಾರಿಗಳು.