ನವದೆಹಲಿ(ಆ.12): ಶಿಯಾ ವಕ್ಫ್ ವ್ಯಾಪ್ತಿಯ ಎಲ್ಲಾ ಶಾಖೆಗಳಲ್ಲಿ ಅಗಸ್ಟ್ 15ರಂದು 'ಭಾರತ್ ಮಾತಾ ಕೀ ಜೈ' ಕಡ್ಡಾಯಗೊಳಿಸಿ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಆದೇಶ ಹೊರಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಬಳಿಕ 'ಭಾರತ್ ಮಾತಾಕಿ ಜೈ' ಘೋಷಣೆ ಕಡ್ಡಾಯಗೊಳಿಸಿರುವ ರಿಜ್ವಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರಗೀತೆ ಬಳಿಕ ಭಾರತ್ ಮಾತಾ ಕೀ ಜೈ ಹೇಳುವುದು ಕಡ್ಡಾಯ ಎಂದಿರುವ ರಿಜ್ವಿ, ಈ ಘೋಷಣೆ ಕೂಹಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಹೇಳಿದ್ದಾರೆ. 

ಮದರಸಾಗಳು ದೇಶಕ್ಕೆ ಡಾಕ್ಟರ್, ಇಂಜಿನಿಯರ್, ಐಎಎಸ್ ಅಧಿಕಾರಿಗಳನ್ನು ನೀಡುತ್ತಿಲ್ಲ. ಬದಲಾಗಿ ಭಯೋತ್ಪಾದಕರನ್ನು ನೀಡುತ್ತಿವೆ. ಹೀಗಾಗಿ ಮದರಸಾಗಳನ್ನು ಮುಖ್ಯವಾಹಿನಿಗೆ ತರಬೇಕು ಎಂದು ಒತ್ತಾಯಿಸಿ ರಿಜ್ವಿ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.