ಇಡೀ ದೇಶವೇ ಹೊಸ ತೆರಿಗೆ ವ್ಯವಸ್ಥೆ ಜಿಎಸ್ಟಿಯನ್ನು ಅಳವಡಿಸಿಕೊಳ್ಳಲು ಸಜ್ಜಾಗುತ್ತಿದೆ, ಆದರೆ ಉತ್ತರ ಪ್ರದೇಶದ ಸಚಿವರೇ ಜಿಎಸ್ಟಿಯ ಪೂರ್ಣರೂಪ ಗೊತ್ತಿಲ್ಲದೇ ಯೋಗಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ ಘಟನೆ ನಡೆದಿದೆ.

ಮಹಾರಾಜಗಂಜ್, ಉತ್ತರ ಪ್ರದೇಶ: ಇಡೀ ದೇಶವೇ ಹೊಸ ತೆರಿಗೆ ವ್ಯವಸ್ಥೆ ಜಿಎಸ್ಟಿಯನ್ನು ಅಳವಡಿಸಿಕೊಳ್ಳಲು ಸಜ್ಜಾಗುತ್ತಿದೆ, ಆದರೆ ಉತ್ತರ ಪ್ರದೇಶದ ಸಚಿವರೇ ಜಿಎಸ್ಟಿಯ ಪೂರ್ಣರೂಪ ಗೊತ್ತಿಲ್ಲದೇ ಯೋಗಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಎಸ್ಟಿ ಬಗ್ಗೆ ಪ್ರಚಾರ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಮಾಧ್ಯಮದವರು ಸಮಾಜ ಕಲ್ಯಾಣ ಸಚಿವ ರಾಮಪತಿ ಶಾಸ್ತ್ರಿಯವರನ್ನು ಜಿಎಸ್ಟಿಯ ಪೂರ್ಣರೂಪವೇನೆಂದು ಕೇಳಿದ್ದಾರೆ. ಆದರೆ ಶಾಸ್ತ್ರಿಯವರು ಅದಕ್ಕೆ ಉತ್ತರಿಸಲಾಗದೇ ಪರದಾಡಿದ್ದಾರೆ.

ಕೊನೆಗೆ, ನನಗೆ ಪೂರ್ಣರೂಪ ಏನೆಂದು ತಿಳಿದಿದೆ, ನಾನು ಜಿಎಸ್’ಟಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದೇನೆ ಎಂದು ಹೇಳಿ ಜಾರಿಕೊಂಡಿದ್ದಾರೆ.

ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ ಜಿಎಸ್ಟಿ ಜಾರಿಯಾಗಲಿದೆ.