ಹೆಂಡತಿಗೆ ಯಾಮಾರಿಸಲು ಸತ್ತವನಿಗೆ ಆಗಿದ್ದೇನು?

First Published 26, Jun 2018, 8:14 PM IST
UP man held in Mumbai for faking own murder to implicate wife
Highlights

ತಾನು ಸತ್ತು ಹೋಗಿದ್ದೇನೆ ಎಂದು ಹೆಂಡತಿ ಮತ್ತು ಆಕೆಯ ಕುಟುಂಬದವರಿಗೆ ಯಾಮಾರಿಸಲು ಹೋದವ ಅಂತಿಮವಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಏನಿದು ಸ್ಟೋರಿ. ಮುಂದೆ ಓದಿ..

ಮುಂಬೈ[ಜೂ.26] ತಾನು ಸತ್ತು ಹೋಗಿದ್ದೇನೆ ಎಂದು ಹೆಂಡತಿ ಮತ್ತು ಆಕೆಯ ಕುಟುಂಬದವರಿಗೆ ಯಾಮಾರಿಸಲು ಹೋದವ ಅಂತಿಮವಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ

37 ವರ್ಷದ ಉತ್ತರ ಪ್ರದೇಶದ ಪನ್ನಾಲಾಲ್ ಮುಂಬೈನಲ್ಲಿ ಬೇರೆ ಹೆಸರಿನಲ್ಲಿ ವಾಸ ಮಾಡುತ್ತಿದ್ದ. ಇದೀಗ ಸತ್ತವ ಮತ್ತೆ ಪೊಲೀಸ್ ಠಾಣೆಯಲ್ಲಿದ್ದಾನೆ.

ತನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದಾನೆ ಎಂದು ಪನ್ನಾಲಾಲ್ ಹೆಂಡತಿ  ದೂರು ದಾಖಲಿಸಿದ್ದಳು. ನಂತರ ಮಾತುಕತೆ ಮೂಲಕ ಪ್ರಕರಣ ಬಗೆಹರಿಸಲಾಗಿತ್ತು.

ಆದರೆ ಹೆಂಡತಿ ಮೇಲೆ ಹಗೆ ಸಾಧಿಸುತ್ತಿದ್ದ ಪನ್ನಾಲಾಲ್ ಸಂಬಂಧಿಕರ ಮನೆಗೆ ಹೋದವ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಇದಾದ ಮೇಲೆ ಆತನ ಹೆಂಡತಿಯೇ ಕೊಲೆ ಮಾಡಿಸಿದ್ದಾಳೆ ಎಂದು ಪನ್ನಾಲಾಲ್ ಕುಟುಂಬದವರು ದೂರು ದಾಖಲಿಸಿದ್ದರು. ಆದರೆ ಮುಂಬೈನಲ್ಲಿ ಬೇರೆ ಹೆಸರು ಇಟ್ಟುಕೊಂಡು ವಾಸ ಮಾಡುತ್ತಿದ್ದ ಪನ್ನಾಲಾಲ್ ಇದೀಗ ಪೊಲೀಸ್ ಠಾಣೆಯಲ್ಲಿದ್ದಾನೆ.

loader