ಬ್ಯಾಂಕ್‌ ಖಾತೆ ತೆರೆಯಲು, ಸರ್ಕಾರಿ ಸಬ್ಸಿಡಿ ಪಡೆಯಲು ಆಧಾರ್‌ ಕಡ್ಡಾಯ ಮಾಡಿದ್ದಾಯ್ತು. ಈಗ ಉತ್ತರಪ್ರದೇಶ ಬಿಜನೋರ್‌ ಜಿಲ್ಲೆಯಲ್ಲಿ ಸರ್ಕಾರದ ಉಚಿತ ಆ್ಯಂಬುಲೆನ್ಸ್‌ ಸೇವೆ ಪಡೆಯಲೂ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ.
ಆ್ಯಂಬುಲೆನ್ಸ್ನ ಚಾಲಕರು ಯಾವ ರೋಗಿಯನ್ನೂ ಸಾಗಣೆ ಮಾಡದಿದ್ದರೂ, ಇಂಧನ ವೆಚ್ಚ ರೂಪದಲ್ಲಿ ಸರ್ಕಾರದಿಂದ ಹಣ ಪಡೆಯುತ್ತಿದ್ದರು. ಅಲ್ಲದೆ ಕೆಲವು ಚಾಲಕರು ತಾವೇ ಕರೆ ಮಾಡಿ ನಕಲಿ ಟ್ರಿಪ್ಗಳನ್ನು ಸೃಷ್ಟಿಸುತ್ತಿದ್ದರು. ಇಂತಹ ಅಕ್ರಮಗಳಿಗೆಲ್ಲಾ ಕಡಿವಾಣ ಹಾಕಲು ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ.
