ಯೋಗಿ ಆದಿತ್ಯನಾಥ್ ಸರ್ಕಾರ 37 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. 

ಲಕ್ನೋ (ಮಾ. 17): ಯೋಗಿ ಆದಿತ್ಯನಾಥ್ ಸರ್ಕಾರ 37 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. 

5 ಕಮಿಷನರ್ ಸೇರಿದಂತೆ ಗೋರಖ್’ಪುರ ಜಿಲ್ಲಾಧಿಕಾರಿ ರಾಜೀವ್ ರೌತೇಲಾರನ್ನು ವರ್ಗಾವಣೆ ಮಾಡಲಾಗಿದೆ. ರೌತೇಲಾರನ್ನು ದೇವಿ ಪಠಾಣ್’ಗೆ ವರ್ಗಾವಣೆ ಮಾಡಿದ್ದರೆ, ಕೆ ವಿಜಯೇಂದ್ರ ಪಂಡಿಯನ್’ರನ್ನು ಗೋರಖ್’ಪುರ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಸಹರಾನ್ಪುರ ಕಮಿಷನರ್ ದೀಪಕ್ ಅಗರ್’ವಾಲ್’ರನ್ನು ವಾರಣಾಸಿಗೆ ವರ್ಗಾವಣೆ ಮಾಡಿದ್ದರೆ ಸಹರಾನ್ಪುರಕ್ಕೆ ಚಂದ್ರ ಪ್ರಕಾಶ್ ತ್ರಿಪಾಠಿಯನ್ನು ವರ್ಗಾವಣೆ ಮಾಡಲಾಗಿದೆ. ಗೋರಖ್’ಪುರ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ನಂತರ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.