ಗೋವು ರಕ್ಷಣೆಯಲ್ಲಿ ವಿಫಲ ಹಿನ್ನೆಲೆತಮ್ಮ ವಿರುದ್ಧವೇ ದೂರು ದಾಖಲಿಸಿದ ಅಧಿಕಾರಿಮಿರತ್ ನ ಮುಖ್ಯ ಠಾಣಾಧಿಕಾರಿ ರಾಜೇಂದ್ರ ತ್ಯಾಗಿಗೋವು ರಕ್ಷಿಸುವಲ್ಲಿ ವಿಫಲವಾಗಿದ್ದಕ್ಕೆ ಸ್ವತಃ ದೂರು

ಲಕ್ನೋ(ಜು.೧೫): ಉತ್ತರಪ್ರದೇಶದ ಮಿರತ್ ನ ಮುಖ್ಯ ಠಾಣಾಧಿಕಾರಿಯಾಗಿರುವ ರಾಜೇಂದ್ರ ತ್ಯಾಗಿ, ಗೋವು ಕಳ್ಳಸಾಗಾಣೆಯನ್ನು ತಡೆಯಲು ವಿಫಲವಾಗಿದ್ದಕ್ಕೆ ತಮ್ಮನ್ನೂ ಸೇರಿದಂತೆ ಒಟ್ಟು ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜೇಂದ್ರ ತ್ಯಾಗಿ ಕಾರಾಕೋಡಾ ಠಾಣೆಯ ಉಸ್ತುವಾರಿ ತೆಗೆದುಕೊಳ್ಳುವುದಕ್ಕೂ ಮುಂಚೆಯೇ ಸ್ವತಃ ಇಂತದ್ದೊಂದು ಕಟ್ಟಳೆಯನ್ನು ಹಾಕಿಕೊಂಡಿದ್ದರು. ಅಪರಾಧವನ್ನು ತಡೆಯುವಲ್ಲಿ ತಮ್ಮನ್ನೂ ಸೇರಿಸಿದಂತೆ ಠಾಣೆಯ ಅಧಿಕಾರಿಗಳು ವಿಫಲವಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತ್ಯಾಗಿ ತಿಳಿಸಿದ್ದರು.

Scroll to load tweet…

ಅದರಂತೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗೋವು ಕಳ್ಳಸಾಗಾಣೆಯನ್ನು ತಡೆಯುವಲ್ಲಿ ವಿಫಲರಾದ ಕಾರಣ ತಮ್ಮ ವಿರುದ್ಧವೇ ದೂರು ದಾಖಲಿಸಿದ್ದಾರೆ. ಇದುವರೆಗೂ ಈ ಠಾಣೆಯಲ್ಲಿ ಒಟ್ಟು 19 ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿರುವುದು ವಿಶೇಷ.