ಮುಸ್ಲಿಮರು ಧರಿಸುವ ಟೋಪಿ ಧರಿಸಲು ಯೋಗಿ ನಕಾರಮಾಘರ್ ನ ಸಂತ ಕಬೀರ್ ಕ್ಷೇತ್ರಕ್ಕೆ ಭೇಟಿ ನಿಡಿದ್ದ ಯೋಗಿಧರ್ಮಗುರುಗಳು ಟೋಪಿ ಹಾಕಲು ಬಂದಾಗ ನಡೆದ ಘಟನೆಟೋಪಿ ಹಾಕದಂತೆ ದಂFಗುರುಗಳಿಗೆ ಯೊಗಿ ಸೂಚನೆ
ಮಾಘರ್(ಜೂ.28): ಉತ್ತರ ಪ್ರದೇಶದ ಮಾಘರ್ ನಲ್ಲಿರುವ ಪ್ರಸಿದ್ಧ ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಮುಸ್ಲಿಮರು ಧರಿಸುವ ಉಣ್ಣೆಯ ಟೋಪಿ ಧರಿಸಲು ನಿರಾಕರಿಸಿದ್ದಾರೆ.
ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಅಥವಾ ಜಮ್ಮು -ಕಾಶ್ಮೀರದ ಮಾಜಿ ಸಿಎಂ ಫಾರೂಖ್ ಅಬ್ದುಲ್ ಅಂತಹವರು ಇಂತಹ ಟೋಪಿ ಧರಿಸುತ್ತಿದ್ದರಂತೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಆದಿತ್ಯನಾಥ್ ಅವರಿಗೆ, ಅಲ್ಲಿನ ಧರ್ಮಗುರುಗಳು ಟೋಪಿ ಧರಿಸಲು ಮುಂದಾದಾಗ ಅದನ್ನುಧರಿಸಲು ಯೋಗಿ ನಿರಾಕರಿಸಿದ್ದಾರೆ.
2011ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅಹಮದಾಬಾದಿನಲ್ಲಿ ಸದ್ಬಾವನಾ ಉಪವಾಸ ಸಂದರ್ಭದಲ್ಲಿ ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿದ್ದರು. ಆ ಟೋಪಿ ಐಕ್ಯತೆಯ ಸಂಕೇತವಾಗಿದ್ದರೆ ಮಹಾತ್ಮ ಗಾಂಧಿ ಏಕೆ ಅದನ್ನು ತೊಡಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೆ ನೀಡಿದ್ದರು. ಟೋಪಿ ಧರಿಸುವುದು ಐಕ್ಯತೆಯ ಸಂಕೇತವಾಗಿದ್ದರೆ, ಮಹಾತ್ಮ ಗಾಂಧೀಜಿ, ಸರ್ದಾರ್ ಪಟೇಲ್, ಪಂಡಿತ್ ಜವಹರಲಾಲ್ ನೆಹರೂ ಏಕೆ ಆ ಟೋಪಿ ತೊಟ್ಟಿರಲಿಲ್ಲ ಎಂದು ಪ್ರಶ್ನಿಸಿದ್ದರು.
ಎರಡು ದಿನಗಳ ಕಬೀರ್ ಮಹೋತ್ಸವ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮಾಘರ್ ಗೆ ಆಗಮಿಸಿದ್ದು, ಕಬೀರ್ ಅವರು ಮಝರ್ ನಲ್ಲಿ ಚಾದರ್ ಪೂಜೆ ಸಲ್ಲಿಸಿದರು. ಬಳಿಕ ಕಬೀರ್ ಅಕಾಡೆಮಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದರು.
