‘ಸಂಪರ್ಕ್ ಫಾರ್ ಸಮರ್ಥನ್’: ‘ಯೋಗಿ’ ಭೇಟಿಯಾದ ‘ಬಾಬಾ’..!

First Published 9, Jun 2018, 4:43 PM IST
UP CM Yogi Adityanath meets actor Sanjay Dutt
Highlights

ನಟ ಸಂಜಯ್ ದತ್ ಅವರನ್ನು ಭೇಟಿಯಾದ ಯುಪಿ ಸಿಎಂ

‘ಸಂಪರ್ಕ್ ಫಾರ್ ಸಮರ್ಥನ್’ ಅಭಿಯಾನಕ್ಕೆ ಸಂಜು ಬೆಂಬಲ

ಮೋದಿ ಸರ್ಕಾರದ ಸಾಧನಾ ಕಿರುಹೊತ್ತಿಗೆ ನೀಡಿದ ಯೋಗಿ ಆದಿತ್ಯನಾಥ್

ಲಕ್ನೋ[ಜೂ.9]: ಬಾಲಿವುಡ್ ನಟ ಸಂಜಯ್ ದತ್ ಇಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಲಕ್ನೋದಲ್ಲಿ ನಡೆದ ಬಿಜೆಪಿಯ ‘ಸಂಪರ್ಕ್ ಫಾರ್ ಸಮರ್ಥನ್’ ಕಾರ್ಯಕ್ರಮದಲ್ಲಿ ಸಂಜಯ್ ದತ್ ಭಾಗವಹಿಸಿದ್ದರು.

ಯೋಗಿ ಆದಿತ್ಯನಾಥ್ ಅಧಿಕೃತ ನಿವಾಸಕ್ಕೆ ತೆರಳಿದ ಸಂಜಯ್ ದತ್, ಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಮೋದಿ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಬಿಂಬಿಸುವ ಕಿರು ಹೊತ್ತಿಗೆಯನ್ನು ಸಿಎಂ ಸಂಜಯ್ ದತ್ ಅವರಿಗೆ ನೀಡಿದರು.

ಕೇಂದ್ರದ ಮೋದಿ ಸರ್ಕಾರ ನಾಲ್ಕು ವರ್ಷ ಸಂಪೂರ್ಣಗೊಳಿಸಿದ ಹಿನ್ನೆಲೆಯಲಿ ಬಿಜೆಪಿ ರಾಷ್ತಾಧ್ಯಕ್ಷ ಅಮಿತ್ ಶಾ ಮೇ 29 ರಂದು ‘ಸಂಪರ್ಕ್ ಫಾರ್ ಸಮರ್ಥನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈಗಾಗಲೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಉದ್ಯಮಿ ರತನ್ ಟಾಟಾ, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಮತ್ತು ಕ್ರೀಡಾಪಟು ಮಿಲ್ಕಾ ಸಿಂಗ್ ಸೇರಿದಂತೆ ಹಲವು ನಾಯಕರನ್ನು ಅಮಿತ್ ಶಾ ಭೇಟಿ ಮಾಡಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ನಿನ್ನೆ ಚಿತ್ರಲೇಖಕ ಸಲೀಂ ಖಾನ್ ಮತ್ತು ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿ ಅಭಿಯಾನಕ್ಕೆ ಬೆಂಬಲ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

loader