ಈಗ ಹಳೆಯ ವಿಧಾನಸಭೆಗಳಲ್ಲಿ ಉದ್ದನೆಯ ಮೈಕ್‌ಗಳಿದ್ದು ಇವುಗಳನ್ನು ಕುಪಿತ ಶಾಸಕರು ಮುರಿದು ಹಾಕುವ ಉದಾಹರಣೆಗಳಿವೆ. ಆದರೆ ಆಂಧ್ರ ವಿಧಾನಸಭೆಯಲ್ಲಿ ಜರ್ಮನ್ ತಂತ್ರಜ್ಞಾನದೊಂದಿಗೆ ಅಲ್ಟ್ರಾಮಾಡರ್ನ್ ಮೈಕ್‌ಗಳನ್ನು ಬೆಂಚ್‌ನಲ್ಲೇ ಅಳವಡಿಸಲಾಗಿದೆ. ಸದಸ್ಯರು ಎದ್ದು ನಿಂತರೆ ಸಾಕು ತನ್ನಿಂತಾನೇ ಆನ್ ಆಗುತ್ತವೆ. ಕೂತರೆ ಆಫ್ ಆಗುತ್ತವೆ. ಇವುಗಳನ್ನು ಮುರಿಯಲು, ಎಸೆಯಲು ಆಗದು.

ಹೈದರಾಬಾದ್(ಫೆ.21): ವಿಧಾನಸಭೆಗಳು ಎಂದರೆ ಇತ್ತೀಚಿನ ತಮಿಳುನಾಡು ವಿಧಾನಸಭೆಯಲ್ಲಿನ ಮಾರಾಮಾರಿಯೇ ನೆನಪಿಗೆ ಬರುತ್ತದೆ.

ಆದರೆ, ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಹೊಸ ವಿಧಾನಸಭೆ ನಿರ್ಮಾಣವಾಗುತ್ತಿದೆ. ಈ ವಿಧಾನಸಭೆಯು ಇಂಥ ಯಾವುದೇ ಗದ್ದಲಕ್ಕೆ ‘ಮಣಿಯದಂತೆ’ ರೂಪುಗೊಳ್ಳಲಿದೆ.

ಈಗ ಹಳೆಯ ವಿಧಾನಸಭೆಗಳಲ್ಲಿ ಉದ್ದನೆಯ ಮೈಕ್‌ಗಳಿದ್ದು ಇವುಗಳನ್ನು ಕುಪಿತ ಶಾಸಕರು ಮುರಿದು ಹಾಕುವ ಉದಾಹರಣೆಗಳಿವೆ. ಆದರೆ ಆಂಧ್ರ ವಿಧಾನಸಭೆಯಲ್ಲಿ ಜರ್ಮನ್ ತಂತ್ರಜ್ಞಾನದೊಂದಿಗೆ ಅಲ್ಟ್ರಾಮಾಡರ್ನ್ ಮೈಕ್‌ಗಳನ್ನು ಬೆಂಚ್‌ನಲ್ಲೇ ಅಳವಡಿಸಲಾಗಿದೆ. ಸದಸ್ಯರು ಎದ್ದು ನಿಂತರೆ ಸಾಕು ತನ್ನಿಂತಾನೇ ಆನ್ ಆಗುತ್ತವೆ. ಕೂತರೆ ಆಫ್ ಆಗುತ್ತವೆ. ಇವುಗಳನ್ನು ಮುರಿಯಲು, ಎಸೆಯಲು ಆಗದು.

ಇದೇ ವೇಳೆ, ಸ್ಪೀಕರ್ ಪೀಠವನ್ನು ನೆಲ ಮಟ್ಟಕ್ಕಿಂತ 7 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಇದು ಕುಪಿತ ಶಾಸಕರು ಸ್ಪೀಕರ್ ಪೀಠದತ್ತ ಸುಲಭವಾಗಿ ನುಗ್ಗುವುದನ್ನು ತಡೆಯುತ್ತದೆ. ಶಪರ್ಪೋನ್‌ಜಿ ಪಲ್ಲೋನ್‌ಜಿ ಸಮೂಹವು ವಿಧಾನಸಭೆಯನ್ನು ವಿನ್ಯಾಸಗೊಳಿಸಿದೆ.